back to top
24.8 C
Bengaluru
Friday, June 6, 2025
HomeNewsChennai ಗೆ ಮತ್ತೊಂದು ಸೋಲು: Rajasthan ಮೊದಲ ಜಯ!

Chennai ಗೆ ಮತ್ತೊಂದು ಸೋಲು: Rajasthan ಮೊದಲ ಜಯ!

- Advertisement -
- Advertisement -

IPL 2025ನಲ್ಲಿ Chennai Super Kings (CSK) ಮತ್ತೆ ಸೋಲು ಅನುಭವಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 6 ರನ್ ಅಂತರದಿಂದ ಪರಾಭವಗೊಂಡಿದೆ. ಇದು CSK ಗೆ  ಸತತ ಎರಡನೇ ಸೋಲಾಗಿದ್ದು, ಇದಕ್ಕೂ ಮುನ್ನ ಆರ್‌ಸಿಬಿ ವಿರುದ್ಧ ತವರಿನಲ್ಲಿ ಸೋಲು ಕಂಡಿತ್ತು.

ಗುಹವಾಟಿಯಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ 183 ರನ್ ಗುರಿ ನೀಡಿತು. ಚೆನ್ನೈ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್‌ನಲ್ಲೇ ರಚಿನ್ ರವೀಂದ್ರ ಕ್ಲೀನ್ ಬೋಲ್ಡ್ ಆದರು. ರಾಹುಲ್ ತ್ರಿಪಾಠಿ (23) ಮತ್ತು ಶಿವಂ ದುಬೆ (18) ತಂಡವನ್ನು ಗೆಲುವಿನ ಹಾದಿಗೆ ತರುವ ಪ್ರಯತ್ನ ಮಾಡಿದರು ಆದರೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ.

ಒಂದೆಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ, ನಾಯಕ ರುತುರಾಜ್ ಗಾಯಕವಾಡ್ (63) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 44 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದು ಅರ್ಧಶತಕ ಪೂರೈಸಿದರು. ಆದರೆ ಕೊನೆಯ 5 ಓವರ್‌ಗಳಲ್ಲಿ 61 ರನ್ ಅಗತ್ಯವಿರುವಾಗ, ಹಸರಂಗ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರುತುರಾಜ್ ಮುಂದಿನ ಎಸೆತದಲ್ಲೇ ಔಟಾದರು. ಇದರಿಂದಾಗಿ CSK ಮೇಲೆ ಒತ್ತಡ ಹೆಚ್ಚಾಯಿತು. ಧೋನಿ ಹಾಗೂ ಜಡೇಜಾ ಕೊನೆಯವರೆಗೂ ಹೋರಾಡಿದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.

ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ಉತ್ತಮ ಪ್ರಾರಂಭವನ್ನು ಪಡೆದಿತು. ನಿತೀಶ್ ರಾಣಾ (81) ಮಿಂಚಿನ ಆಟ ಆಡಿದರೂ, ತಂಡ 200+ ಸ್ಕೋರ್ ಪೇರಿಸಲು ವಿಫಲವಾಯಿತು. ಯಶಸ್ವಿ ಜೈಸ್ವಾಲ್ (4) ಬೇಗನೆ ಔಟಾದರು, ಆದರೆ ರಿಯಾನ್ ಪರಾಗ್ (37) ಉತ್ತಮ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಹೆಚ್ಚಿಸಿದರು.

ಚೆನ್ನೈ ಪರ ಖಲೀಲ್ ಅಹ್ಮದ್, ನೂರ್ ಅಹ್ಮದ್ ಮತ್ತು ಪತಿರಾನ ತಲಾ ಎರಡು ವಿಕೆಟ್ ಪಡೆದು ರಾಜಸ್ಥಾನ ಬ್ಯಾಟಿಂಗ್ ನಿಯಂತ್ರಿಸಿದರು. ಅಶ್ವಿನ್ ಹಾಗೂ ಜಡೇಜಾ ತಲಾ ಒಂದು ವಿಕೆಟ್ ಕಬಳಿಸಿದರು. ರಾಜಸ್ಥಾನ ಪರ ಹಸರಂಗ ಮೂರು ವಿಕೆಟ್ ಪಡೆದು ಚೆನ್ನೈ ತಂಡವನ್ನು ಕಷ್ಟಕ್ಕೆ ನೂಕಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page