ಇಂಗ್ಲೆಂಡ್ ವಿರುದ್ಧದ ಅಂಡರ್-19 ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಆರಂಭವನ್ನು ನೀಡಿದ್ದು, ನಾಯಕ ಆಯುಷ್ ಮ್ಹಾತ್ರೆ (Ayush Mhatre) ತಮ್ಮ ಮೊದಲ ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ. ಕೆಂಟ್‌ನ ಬೆಕೆನ್ಹ್ಯಾಮ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ, ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 450 ರನ್ ಗಳಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕ ಮ್ಹಾತ್ರೆ 115 ಎಸೆತಗಳಲ್ಲಿ 102 ರನ್ ಬಾರಿಸಿದರು. 14 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಸಿಡಿಸಿದ ಈ ಶತಕವು ಅವರ ಯೂತ್ ಟೆಸ್ಟ್ ಗೆ ಚೊಚ್ಚಲ ಶತಕವಾಗಿದ್ದು, 36ನೇ ಓವರ್‌ನಲ್ಲಿ ಲಾಫ್ಟ್ ಶಾಟ್ ಮೂಲಕ ಶತಕ ಪೂರೈಸಿದರು. ನಂತರ 38ನೇ ಓವರ್‌ನಲ್ಲಿ ಔಟ್ ಆದರು.
ಐಪಿಎಲ್ 2025ರ ಚಿನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಬದಲಿ ಆಟಗಾರನಾಗಿ ಮ್ಹಾತ್ರೆ ಆಡಿದ್ದು, 7 ಪಂದ್ಯಗಳಲ್ಲಿ 188.97ರ ಸ್ಟ್ರೈಕ್ ರೇಟ್‌ನೊಂದಿಗೆ 240 ರನ್ ಗಳಿಸಿದ್ದರು. ಈ ದಾಖಲೆಯು ಅವರಿಗೆ ಹೆಚ್ಚಿನ ಪಾಠೀಯತೆ ತಂದಿದೆ.
ಇದೇ ಪಂದ್ಯದಲ್ಲಿ ಅಭಿಗ್ಯಾನ್ ಕುಂಡು 90 ರನ್ ಮತ್ತು ರಾಹುಲ್ ಕುಮಾರ್ 85 ರನ್ ಗಳಿಸಿದರು. ಇಂಗ್ಲೆಂಡ್ ಪರ ವಾನ್, ಅಲೆಕ್ಸ್ ಗ್ರೀನ್ ಮತ್ತು ಜ್ಯಾಕ್ ಹೋಮ್ ತಲಾ ಎರಡು ವಿಕೆಟ್ ಪಡೆದರು.
ಭಾರತ ಕಿರಿಯರ ತಂಡ ಇದೀಗ ಟೆಸ್ಟ್ ಸರಣಿಯಲ್ಲೂ ಸರಣಿಯನ್ನು ಗೆಲ್ಲುವ ದೃಢ ನಿಲುವು ತೋರಿಸಿದೆ.