
Chikkaballapur : ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಇದೇ ಡಿಸೆಂಬರ್ 27 ಮತ್ತು 28ರಂದು ನಡೆಯಲಿರುವ 60ನೇ ರಾಜ್ಯ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಚಿಕ್ಕಬಳ್ಳಾಪುರ ಜಿಲ್ಲಾ ತಂಡವನ್ನು ಆಯ್ಕೆ ಮಾಡಲು ಡಿಸೆಂಬರ್ 13 ರಂದು ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಆಯ್ಕೆ ಪ್ರಕ್ರಿಯೆಯಲ್ಲಿ 16, 18, 20 ಮತ್ತು 23 ವಯೋಮಾನದ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಬಹುದು. ಸ್ಪರ್ಧೆಗಾಗಿ 2 ಕಿ.ಮೀ., 4 ಕಿ.ಮೀ., 6 ಕಿ.ಮೀ., 8 ಕಿ.ಮೀ., ಮತ್ತು 10 ಕಿ.ಮೀ. ದೂರದ ಓಟಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಕಡ್ಡಾಯವಾಗಿ ಯುಐಡಿ (UID) ನೋಂದಾಯಿಸಿರಬೇಕು. ಪ್ರವೇಶ ಶುಲ್ಕವನ್ನು ಸಬ್‌ಜೂನಿಯರ್ಸ್‌ಗೆ ₹ 200 ಮತ್ತು ಜೂನಿಯರ್ಸ್‌ಗೆ ₹ 300 ಎಂದು ನಿಗದಿಪಡಿಸಲಾಗಿದೆ. ಯುಐಡಿ ನೋಂದಣಿ ಇಲ್ಲದ ಕ್ರೀಡಾಪಟುಗಳು ತಮ್ಮ ಆಧಾರ್ ಕಾರ್ಡ್, ಜನ್ಮದಿನ ಪ್ರಮಾಣಪತ್ರ ಹಾಗೂ ಭಾವಚಿತ್ರವನ್ನು ತರಬೇಕು. ಸ್ಥಳದಲ್ಲೇ ಯುಐಡಿ ನೋಂದಣಿಗೆ ₹ 250 ವೆಚ್ಚ ತಗಲುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಅವರನ್ನು 9740615534 ಸಂಖ್ಯೆಗೆ ಸಂಪರ್ಕಿಸಬಹುದು.
For Daily Updates WhatsApp ‘HI’ to 7406303366
The post ರಾಜ್ಯ ಗುಡ್ಡಗಾಡು ಓಟಕ್ಕೆ ಜಿಲ್ಲಾ ತಂಡ ಆಯ್ಕೆ: ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಡಿ. 13 ರಂದು ಟ್ರಯಲ್ಸ್ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.







