
Chikkaballapur : ಭಾನುವಾರ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಮೇಲೆ ಬಂದ ವ್ಯಕ್ತಿ ಚಿಕ್ಕಬಳ್ಳಾಪುರ ನಗರದ B.B ರಸ್ತೆ, ಬಜಾರ್ ರಸ್ತೆ ಮತ್ತು ಬಲಮುರಿ ವೃತ್ತದಲ್ಲಿ ಹೋಗುತ್ತಿದ್ದ ಪಾದಚಾರಿಗಳಿಗೆ (Pedestrians) ಮಾರಾಕಾಸ್ತ್ರದಿಂದ ಹಲ್ಲೆ (Attack) ಮಾಡಿದ್ದಾನೆ ಎನ್ನಾಲಾಗಿದೆ. ಯುವಕ 8 ಕ್ಕೂ ಹೆಚ್ಚು ಮಂದಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದು ಘಟನೆಯಲ್ಲಿ ಸ್ವಾತಿ, ಮನೋಹರ್, ಸಂತೋಷ್, ರೆಹಮಾನ್, ಅರೀಫ್ ಹಾಗೂ ಮುನಿರೆಡ್ಡಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಹಲ್ಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು (Police) ಯಶಸ್ವಿಯಾಗಿದ್ದು ಆರೋಪಿಯ ಹೆಸರು ಚಿಕ್ಕಬಳ್ಳಾಪುರ ನಗರದ ನಿವಾಸಿ ಅರ್ಜುನ್ ಎಂದು ಪೊಲೀಸರು ತಿಳಿಸಿದ್ದಾರೆ.