Home Karnataka Chikkaballapura ಒಂಟಿ ವೃದ್ಧೆಯನ್ನು ಬೆದರಿಸಿ ಚಿನ್ನದ ಸರ ದೋಚಿದ್ದ ಕಳ್ಳ ಪೋಲೀಸರ ವಶಕ್ಕೆ

ಒಂಟಿ ವೃದ್ಧೆಯನ್ನು ಬೆದರಿಸಿ ಚಿನ್ನದ ಸರ ದೋಚಿದ್ದ ಕಳ್ಳ ಪೋಲೀಸರ ವಶಕ್ಕೆ

Chikkaballapur : ಚಿಕ್ಕಬಳ್ಳಾಪುರ ನಗರದ ನಂದಿ ರಸ್ತೆಯ ದಾಳಿಂಬೆ ತೋಟದ ಬಳಿಯ 15 ನೇ ವಾರ್ಡ್ ನ ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬೆದರಿಸಿ ಆಕೆಯ ಕುತ್ತಿಗೆಯಲ್ಲಿದ್ದ 100 ಗ್ರಾಂ ತೂಕದ ಎರಡೆಳೆ ಚಿನ್ನದ ಸರವನ್ನು ಸುಲಿಗೆ ಮಾಡಿ (Robbery) ಪರಾರಿಯಾಗಿದ್ದ ಜಿಲ್ಲೆಯ ಶಿಡ್ಲಘಟ್ಟ (Sidlaghatta) ನಗರದ ಮಯೂರ ಸರ್ಕಲ್ ನಿವಾಸಿ ವರುಣ್ (25) ನನ್ನು ಚಿಕ್ಕಬಳ್ಳಾಪುರ ನಗರ ಪೋಲಿಸ್ ಠಾಣೆಯ ಪೋಲಿಸರು (Police) ಬಂಧಿಸಿದ್ದಾರೆ (Arrest).

ಸುಲಿಗೆ ಕುರಿತು ರಾಧಮ್ಮ ಚಿಕ್ಕಬಳ್ಳಾಪುರ ನಗರ ಪೋಲಿಸ್ ಠಾಣೆಗೆ ತಕ್ಷಣ ಮಾಹಿತಿ ನೀಡಿದ್ದರು. ಮಾಹಿತಿ ಆದರಿಸಿದ ನಗರ ಠಾಣೆಯ ಪಿಎಸ್‌ಐ ಹೆಚ್.ನಂಜುಂಡಯ್ಯ ತಕ್ಷಣ ಸಿಬ್ಬಂದಿಯೊಂದಿಗೆ ಕಾರ್ಯ ಪ್ರವೃತ್ತರಾಗಿ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಆರೋಪಿ ಸುಲಿಗೆಕೋರ ವರುಣ್‌ನನ್ನು ಶಿಡ್ಲಘಟ್ಟ ನಗರದ ಮಯೂರ ಸರ್ಕಲ್ ನಲ್ಲಿ ಸಂಜೆಯ ವೇಳೆಗೆ ಬಂಧಿಸಿ ಬಂಧಿತನಿಂದ 100 ಗ್ರಾಂ ಎರಡೆಳೆ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಪಿಎಸ್‌ಐ ಹೆಚ್.ನಂಜುಂಡಯ್ಯ, ಸಿಬ್ಬಂದಿ ಪೆಂಚಲಯ್ಯ, ರಿಜ್ವಾನ್, ಸತ್ಯನಾರಾಯಣ ಲಕ್ಷ್ಮಣ್, ವಸಂತಕುಮಾರ್, ರಾಜಶೇಖರ್, ಫಕೀರಣ್ಣಗೊಂದಿ, ಚಾಲಕ ಗೌರೀಶಂಕ‌ರ್, ತಾಂತ್ರಕ ಸಹಾಯಕ ರವೀಂದ್ರ ಕುಮಾರ್‌ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

The post ಒಂಟಿ ವೃದ್ಧೆಯನ್ನು ಬೆದರಿಸಿ ಚಿನ್ನದ ಸರ ದೋಚಿದ್ದ ಕಳ್ಳ ಪೋಲೀಸರ ವಶಕ್ಕೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version