
Chikkaballapur : 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ (2nd PUC Result) ಚಿಕ್ಕಬಳ್ಳಾಪುರ ಜಿಲ್ಲೆ ಶೇ 75.80ರಷ್ಟು ಫಲಿತಾಂಶ ದಾಖಲಿಸಿ ರಾಜ್ಯದಾದ್ಯಂತ 11ನೇ ಸ್ಥಾನ ಪಡೆದುಕೊಂಡಿದೆ.
ಹೀಗಾಗಿ ಕಳೆದ ವರ್ಷಕ್ಕಿಂತ ಅಂಕ ಶೇಕಡಾ ಕಡಿಮೆಯಾದರೂ, ಜಿಲ್ಲೆ ತನ್ನ ಸ್ಥಾನವನ್ನು 18ರಿಂದ 11ಕ್ಕೆ ಏರಿಸಿಕೊಂಡಿದೆ.
ಈ ವರ್ಷ ಮೊದಲ ಬಾರಿಗೆ ಪರೀಕ್ಷೆ ಬರೆದ 12,490 ವಿದ್ಯಾರ್ಥಿಗಳ ಪೈಕಿ 9,468 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶ:
ಕಲಾ ವಿಭಾಗ:
ಪರೀಕ್ಷೆ ಬರೆದವರು – 1,194
ಉತ್ತೀರ್ಣರಾದವರು – 549
ಶೇಕಡಾವಾರು ಫಲಿತಾಂಶ – 45.98%
ವಾಣಿಜ್ಯ ವಿಭಾಗ:
ಪರೀಕ್ಷೆ ಬರೆದವರು – 5,115
ಉತ್ತೀರ್ಣರಾದವರು – 3,780
ಶೇಕಡಾವಾರು ಫಲಿತಾಂಶ – 73.9%
ವಿಜ್ಞಾನ ವಿಭಾಗ:
ಪರೀಕ್ಷೆ ಬರೆದವರು – 6,181
ಉತ್ತೀರ್ಣರಾದವರು – 5,139
ಶೇಕಡಾವಾರು ಫಲಿತಾಂಶ – 83.14%
ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿ ಸಾಧಿಸಿದ್ದಾರೆ.
ನಗರ ವಿದ್ಯಾರ್ಥಿಗಳು:
ಒಟ್ಟು – 9,032
ಉತ್ತೀರ್ಣ – 6,688
ಫಲಿತಾಂಶ – 74.05%
ಗ್ರಾಮೀಣ ವಿದ್ಯಾರ್ಥಿಗಳು:
ಒಟ್ಟು – 3,458
ಉತ್ತೀರ್ಣ – 2,780
ಫಲಿತಾಂಶ – 80.39%
ಜಿಲ್ಲಾ ಟಾಪರ್‌ಗಳು:
ವಿಜ್ಞಾನ ವಿಭಾಗ:
ಯಶಸ್‌ಗೌಡ ಎನ್., ಬಿಜಿಎಸ್ ಪಿಯು ಕಾಲೇಜು, ಅಗಲಗುರ್ಕಿ
ಅಂಕ – 596/600
ಜಿಲ್ಲಾ ಪ್ರಥಮ, ರಾಜ್ಯದಲ್ಲಿ 4ನೇ ಸ್ಥಾನ
ವಾಣಿಜ್ಯ ವಿಭಾಗ:
ಸಚಿನ್ ಪಿ., ಬಿಜಿಎಸ್ ಪಿಯು ಕಾಲೇಜು
ಅಂಕ – 595/600
ಜಿಲ್ಲಾ ಪ್ರಥಮ, ರಾಜ್ಯದಲ್ಲಿ 5ನೇ ಸ್ಥಾನ
ಕಲಾ ವಿಭಾಗ:
ಸುಪ್ರಿತಾ ಬಿ.ಎಂ., ಎವಿಎನ್‌ಆರ್ ಪಿಯು ಕಾಲೇಜು, ತೊಂಡೇಬಾವಿ
ಅಂಕ – 575/600
ಜಿಲ್ಲಾ ಪ್ರಥಮ
For Daily Updates WhatsApp ‘HI’ to 7406303366
The post PUC Result :ಚಿಕ್ಕಬಳ್ಳಾಪುರ ಜಿಲ್ಲೆಗೆ ರಾಜ್ಯದಲ್ಲಿ 11ನೇ ಸ್ಥಾನ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.