
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (TAPCMS) ಚುನಾವಣೆಯಲ್ಲಿ (Election) ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಭಾನುವಾರ ನಡೆದ ಚುನಾವಣೆಯಲ್ಲಿ 14 ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧೆ ನಡೆಯಿತು. ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳು 13 ಸ್ಥಾನಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್ ಬೆಂಬಲಿತರು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದರು.
ಒಟ್ಟು 26 ಅಭ್ಯರ್ಥಿಗಳು ವಿವಿಧ ಮೀಸಲು ವರ್ಗಗಳಲ್ಲಿ ಸ್ಪರ್ಧಿಸಿದ್ದರು. ಸಾಮಾನ್ಯ ‘ಎ’ ವರ್ಗದ ಐದು ಸ್ಥಾನಗಳಿಗೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದರೆ, ನಾಗರಾಜು, ಮಧುಚಂದ್ರ ವಿ., ಮುನಿರಾಜು ಕೆ.ಬಿ., ರಮೇಶ್ ಎ. ಅವರು ಜಯಿಸಿದರು. ಸಾಮಾನ್ಯ ‘ಬಿ’ ವರ್ಗದಲ್ಲಿ ನಾರಾಯಣಸ್ವಾಮಿ ಎನ್., ಲಿಂಗಾರೆಡ್ಡಿ ಮತ್ತು ಸಂತೋಷ್ ಡಿ.ಪಿ. ಗೆಲುವು ಕಂಡರು. ಮಹಿಳಾ ಮೀಸಲು ಸ್ಥಾನಗಳಲ್ಲಿ ಸುಜಾತ ಎಸ್., ಸುಮ ಎಸ್. ಜಯಗೊಂಡರು. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಸ್ಥಾನಗಳಲ್ಲಿ ಆವಲಕೊಂಡರಾಯಪ್ಪ ಕೆ. ಮತ್ತು ಈರಚಿನ್ನಪ್ಪ ಅವರು ಜಯಿಸಿದರು. ಹಿಂದುಳಿದ ವರ್ಗ ‘ಎ’ ಮತ್ತು ‘ಬಿ’ಯಲ್ಲಿ ಲಕ್ಷ್ಮಿನರಸಪ್ಪ ಎಂ. ಮತ್ತು ರಾಕೇಶ್ ಮೋಹನ್ ಗೆಲುವು ಸಾಧಿಸಿದರು.
For Daily Updates WhatsApp ‘HI’ to 7406303366
The post TAPCMS ಚುನಾವಣೆಯಲ್ಲಿ BJP-JDS ಮೈತ್ರಿಕೂಟದ ಭರ್ಜರಿ ಗೆಲುವು appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.