Chikkajajur, Chitradurga : ಚಿಕ್ಕಜಾಜೂರು ಸಮೀಪದ ಚಿಕ್ಕಜಾಜೂರು ಕಾವಲ್ (Chikkajajur Kaval) ಗ್ರಾಮದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮೀ (Kolhapur Mahalaxmi) ಮತ್ತು ವೆಂಕಟೇಶ್ವರಸ್ವಾಮಿ ದೇವಸ್ಥಾನಗಳ (Venkateswara Swamy Temple) ಗುದ್ದಲಿ ಪೂಜೆಯನ್ನು ಶಾಸಕ ಎಂ. ಚಂದ್ರಪ್ಪ (M Chandrappa), ಭೋವಿ ಪೀಠಾಧ್ಯಕ್ಷರಾದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ (Sri Immadi Siddarameshwara Swamiji) ಮತ್ತು ವಿಧಾನ ಪರಿಷತ್ತಿನ ನೂತನ ಸದಸ್ಯ ಕೆ.ಎಸ್. ನವೀನ್ ಭಾನುವಾರ ನೆರವೇರಿಸಿದರು.
ಭೂಮಿಪೂಜೆ ನೆರವೇರಿಸಿದ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ದೇವಸ್ಥಾನದ ನಿರ್ಮಾಣಕ್ಕೆ ₹ 30 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದರು. ವಿಧಾನ ಪರಿಷತ್ತಿನ ನೂತನ ಸದಸ್ಯ ಕೆ.ಎಸ್. ನವೀನ್ ಅವರನ್ನು ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಎಸ್. ಮೂರ್ತಿ, ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷರೂ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಿ.ಸಿ. ಮೋಹನ್ ಮಾತನಾಡಿದರು. ಬಿಜೆಪಿ ಮುಖಂಡ ಜಿ.ಎಚ್. ಇಂದ್ರಪ್ಪ, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಂದಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಿವಕುಮಾರ್, ಸಿ.ವಿ. ಶಶಿಧರ್, ನಿವೃತ್ತ ಎಂಜಿನಿಯರ್ ಈಶ್ವರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.