Delhi: ಚೀನಾ ಮತ್ತು ಅಮೆರಿಕ (China and America) ನಡುವಿನ AI ಪೈಪೋಟಿಯ ನಡುವೆ, ಭಾರತವೂ ತನ್ನದೇ ಆದ ಜನರೇಟಿವ್ ಎಐ ಮಾದರಿಯನ್ನು ರಚಿಸಲು ಸಜ್ಜಾಗಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.
ಒಡಿಶಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಶ್ವಿನಿ ವೈಷ್ಣವ್, ಈ ವರ್ಷವೇ ಭಾರತ ತನ್ನದೇ ಆದ ಎಐ ಮಾದರಿಯನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿನ ಆರು ಪ್ರಮುಖ ಡೆವಲಪರ್‌ಗಳು ಈ ಯೋಜನೆಯಲ್ಲಿ ಭಾಗಿಯಾಗಿದ್ದು, 6-8 ತಿಂಗಳೊಳಗೆ ಪ್ರಬಲ ಎಐ ಮಾದರಿಯನ್ನು ರಚಿಸಬಹುದು ಎಂದು ಅವರು ತಿಳಿಸಿದ್ದಾರೆ.
ಭಾರತದ ಎಐ ಮಿಷನ್ ನ ಗಮನದಲ್ಲಿಟ್ಟು, ಸರಕಾರ 19,000 ಜಿಪಿಯುಗಳನ್ನು ಪಡೆದುಕೊಂಡಿದೆ. ಇದರೊಳಗೆ 12,896 Nvidia H100 GPU ಮತ್ತು 1,480 Nvidia H200 GPUಗಳಿವೆ. ಈಗಾಗಲೇ 10,000 ಜಿಪಿಯುಗಳು ಬಳಕೆಗೆ ಸಿದ್ಧವಾಗಿದ್ದು, ಎಲ್ಲರಿಗೂ ಮುಕ್ತವಾಗಲಿವೆ.
ಭಾರತವು ತನ್ನದೇ ಆದ ಫೌಂಡೇಶನ್ ಎಐ ಮಾದರಿಯನ್ನು 6-8 ತಿಂಗಳಲ್ಲಿ ಸಿದ್ಧಪಡಿಸಲಿದೆ. ಇದು ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಅರ್ಥೈಸಲು ತಕ್ಕಂತೆ ವಿನ್ಯಾಸಗೊಳಿಸಲಾಗುವುದು. ಆಸಕ್ತ ಡೆವಲಪರ್‌ಗಳು ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.
2023 ರ ಕೊನೆಯಲ್ಲಿ OpenAI ತನ್ನ ChatGPT ಮೂಲಕ ಎಐ ಕ್ರಾಂತಿಯನ್ನು ಪ್ರಾರಂಭಿಸಿತು. ಅದೇ ಸಮಯದಲ್ಲಿ, ಚೀನಾದ DeepSeek AI ಈ ಪೈಪೋಟಿಗೆ ಸೇರಿದೆ. ಚೀನಾ ಕಡಿಮೆ ವೆಚ್ಚದಲ್ಲಿ ಎಐ ಮಾದರಿಗಳನ್ನು ನಿರ್ಮಿಸುವ ಮೂಲಕ ಅಮೆರಿಕಕ್ಕೆ ತೀವ್ರ ಸ್ಪರ್ಧೆ ನೀಡುತ್ತಿದೆ. ಇದೀಗ, ಭಾರತವೂ ಈ ಪೈಪೋಟಿಗೆ ಸೇರಿದ್ದು, ಮುಂದಿನ ತಿಂಗಳುಗಳಲ್ಲಿ ಮಹತ್ವದ ಬೆಳವಣಿಗೆಯ ನಿರೀಕ್ಷೆ ಇದೆ!