ನವದೆಹಲಿ: ಚೀನಾ ಲಡಾಖ್ ನ (Chin of Ladakh) ಅಕ್ಸಾಯ್ ಚಿನ್ನಲ್ಲಿ 2 ಹೊಸ ಕೌಂಟಿಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.
ವಿದೇಶಾಂಗ ಸಚಿವಾಲಯದ ಪ್ರಕಾರ, “ಈ ಪ್ರದೇಶದಲ್ಲಿ ಚೀನಾದ ಅಕ್ರಮ ಆಕ್ರಮಣವನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ. ಚೀನಾ ಘೋಷಿಸಿರುವ ಕೌಂಟಿಗಳು ಭಾರತದ ಕೇಂದ್ರಾಡಳಿತ ಪ್ರದೇಶ ಲಡಾಖ್ನ ಭಾಗಗಳಲ್ಲಿ ಬರುತ್ತವೆ.”
ಸುಮಾರು 5 ವರ್ಷಗಳ ಬಳಿಕ ಗಡಿ ಮಾತುಕತೆ ಪುನಃ ಆರಂಭವಾದ ಕೆಲ ದಿನಗಳಲ್ಲೇ ಚೀನಾ ಈ ರೀತಿ ಘೋಷಣೆ ಮಾಡಿದ ಹಿನ್ನೆಲೆ, ಭಾರತವು ರಾಜತಾಂತ್ರಿಕ ಮಾರ್ಗಗಳ ಮೂಲಕ ತೀವ್ರ ಪ್ರತಿಭಟನೆ ಸಲ್ಲಿಸಿದೆ.
“ಚೀನಾದ ಈ ಕ್ರಮವು ಭಾರತದ ಸ್ಥಿರವಾದ ನಿಲುವಿನಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಟಿಬೆಟ್ ನ ಯಾರ್ಲುಂಗ್ ತ್ಸಾಂಗ್ಪೋ ನದಿಯಲ್ಲಿ ಚೀನಾ ಜಲವಿದ್ಯುತ್ ಯೋಜನೆ ಬಗ್ಗೆ ತಿಳಿದಿರುವ ಭಾರತದ ಸರ್ಕಾರೆ, ಚೀನಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಸೂಚಿಸಿದೆ.