Search
WhatsApp alerts

Home › India

Bhopal Central Jail ಹತ್ತಿರ ಚೀನಾ ಡ್ರೋನ್ ಪತ್ತೆ

administrator · Published

Drone Near Bhopal Central Jail

ಭೋಪಾಲ್‌ನ ಕೇಂದ್ರ ಕಾರಾಗೃಹದ (Bhopal Central Jail) ಹೈ ಸೆಕ್ಯುರಿಟಿ ಸೆಲ್ ಬಳಿ ಅನುಮಾನಾಸ್ಪದ ಡ್ರೋನ್ ಪತ್ತೆಯಾಗಿದೆ. ಈ ಡ್ರೋನ್ ಚೀನಾ ನಿರ್ಮಿತವಾಗಿದ್ದು, ಭದ್ರತಾ ಸೆಲ್‌ಗಳ ಹತ್ತಿರ ನೆಲದ ಮೇಲೆ ಬಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗಸ್ತು ಸಿಬ್ಬಂದಿಯೊಬ್ಬರು ಡ್ರೋನ್ ಅನ್ನು ಹೆಚ್ಚು ಅಪಾಯದ ಸೆಲ್‌ಗಳ ಹೊರಗೆ ಪತ್ತೆಹಚ್ಚಿದ್ದಾರೆ.

ಆ್ಯಂಡಾ ಸೆಲ್ ಎಂದು ಕರೆಯುವ ಈ ಪ್ರದೇಶವು ಭಯಾನಕ ಗ್ಯಾಂಗ್​ಸ್ಟರ್ ಗಳು ಮತ್ತು ಭಯೋತ್ಪಾದಕರನ್ನು ಹೊಂದಿರುವ ಸೆಲ್ ಆಗಿದೆ. ಘಟನೆಯಿಂದ ಗಾಬರಿಗೊಂಡ ಗಾರ್ಡ್ ಇತರ ಜೈಲು ಅಧಿಕಾರಿಗಳಿಗೆ ಕೂಡಲೆ ಮಾಹಿತಿ ನೀಡಿದ್ದಾರೆ. ನಂತರ, ಡ್ರೋನ್ ಅನ್ನು ಪರೀಕ್ಷೆಗಾಗಿ ಜೈಲು ಅಧೀಕ್ಷಕರ ಕಚೇರಿಗೆ ಸಾಗಿಸಲಾಯಿತು.

ಆರಂಭಿಕ ತನಿಖೆಯ ಪ್ರಕಾರ, ಡ್ರೋನ್ ಎರಡು ಲೆನ್ಸ್‌ಗಳನ್ನು ಹೊಂದಿರುವ ಹಗುರವಾದ ಚೀನೀ ಮಾದರಿಯಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ, ತಾಂತ್ರಿಕ ತಜ್ಞರು ಡ್ರೋನ್‌ನ ಮೂಲವನ್ನು ಪತ್ತೆಹಚ್ಚಲು ವಿಶ್ಲೇಷಣೆ ನಡೆಸುತ್ತಿದ್ದಾರೆ.

ಭೋಪಾಲ್ ಸೆಂಟ್ರಲ್ ಜೈಲು ದೇಶದ ಅತ್ಯಂತ ಸೂಕ್ಷ್ಮ ಜೈಲುಗಳಲ್ಲಿ ಒಂದಾಗಿದೆ. SIMI, Hizb ut-Tahrir (HUT), PFI, ISIS, ಮತ್ತು ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ (JMB) ಸಂಘಟನೆಗಳ 70ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೈ-ಸೆಕ್ಯುರಿಟಿ ಸೆಲ್‌ಗಳಲ್ಲಿ ಇರಿಸಲಾಗಿದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page