Chintamani : ಚಿಂತಾಮಣಿ ನಗರ ಹೊರವಲಯದ ಕಾಗತಿ ಗ್ರಾಮ ಪಂಚಾಯಿತಿ (Kagati Grama Panchayat) ವ್ಯಾಪ್ತಿಯ ಶಿಂಗಸಂದ್ರ ಗ್ರಾಮದಲ್ಲಿ ಶುಕ್ರವಾರ ಮೇಘ ಮಂಡಲಮ್ಮ ದೇವಾಲಯದ (Megha Mandalamma Temple) ಗೋಪುರ ಮತ್ತು ಶಿಲಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು “ಈ ರೀತಿ ನಡೆಯುವ ಪ್ರತಿಷ್ಠಾಪನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಧರ್ಮವನ್ನು ಉಳಿಸಿ ಬೆಳೆಸಬೇಕು ಹಾಗೂ ಮುಂದಿನ ಪೀಳಿಗೆಗೂ ಕೊಡುಗೆಯಾಗಿ ನೀಡಬೇಕು” ಎಂದು ತಿಳಿಸಿದರು.
ಕೆ.ಎಂ.ಕೆ ಟ್ರಸ್ಟ್ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್, ಮುಖಂಡರಾದ ಅಂಕಣ್ಣ, ರಾಜಶೇಖರರೆಡ್ಡಿ, ಪಾಲೇಪಲ್ಲಿ ಶಿವಾರೆಡ್ಡಿ, ಚಂದ್ರ, ಶ್ರೀನಿವಾಸ್, ಖಲೀಲ್, ಶಕೀಲ್, ಶಿಂಗಸಂದ್ರ ಗ್ರಾಮದ ಮೇಸ್ತ್ರೀ ಬೈರಾರೆಡ್ಡಿ, ವೆಂಕಟರಾಮರೆಡ್ಡಿ, ಆನಂದರೆಡ್ಡಿ, ಶ್ರೀನಿವಾಸ್, ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
The post ಮೇಘ ಮಂಡಲಮ್ಮ ದೇವಾಲಯದ ಗೋಪುರ ಮತ್ತು ಶಿಲಾ ವಿಗ್ರಹ ಪ್ರತಿಷ್ಠಾಪನೆ appeared first on Chikkaballapur.