
Chikkaballapur : ಬಾಗೇಪಲ್ಲಿಯ ಜೀವನಾಡಿಯಾದ ಚಿತ್ರಾವತಿ ಜಲಾಶಯಕ್ಕೆ (Chitravathi Reservoir) ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ (SM Krishna) ಅವರ ಹೆಸರಿನ ಬದಲಾಗಿ, ಈ ಪ್ರದೇಶದ ಹೋರಾಟಗಾರರಾಗಿದ್ದ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಹೆಸರನ್ನ ಇಡಬೇಕು ಎಂದು ಆಗ್ರಹಿಸಿ ‘ಚಿತ್ರಾವತಿ ಹೋರಾಟ ಸಮಿತಿ’ ನೇತೃತ್ವದಲ್ಲಿ ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೈಕ್ ರ್ಯಾಲಿ (protest) ನಡೆಯಿತು.
ಈ ಜಲಾಶಯಕ್ಕೆ ಎಸ್.ಎಂ. ಕೃಷ್ಣ ಹೆಸರನ್ನು ಇಡಲಾಗುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಇತ್ತೀಚೆಗಷ್ಟೇ ಪ್ರಕಟಿಸಿ, ಸಚಿವ ಸಂಪುಟದ ಸಭೆಯಲ್ಲೂ ಈ ಬಗ್ಗೆ ತೀರ್ಮಾನವಾಗಿದೆಯೆಂದು ಅವರು ತಿಳಿಸಿದರು. “ಚಿತ್ರಾವತಿ ಎಂಬ ಹೆಸರು ಬಾಗೇಪಲ್ಲಿಯ ಜನರಿಗೆ ಭಾವನಾತ್ಮಕ ಸಂಬಂಧವಿರುವದು. ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಿದ ಜಿ.ವಿ. ಶ್ರೀರಾಮರೆಡ್ಡಿ ಅವರ ಹೆಸರನ್ನೇ ಜಲಾಶಯಕ್ಕೆ ಇಡಬೇಕು,” ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ, ಕೃಷಿಕೂಲಿಕಾರರ ಸಂಘದ ಲಕ್ಷ್ಮಿನಾರಾಯಣರೆಡ್ಡಿ, ಡಾ. ಅನಿಲ್ ಕುಮಾರ್, ಬಿ.ಎನ್. ಮುನಿಕೃಷ್ಣಪ್ಪ, ಚನ್ನರಾಯಪ್ಪ, ರಮಣ, ಶಿವಪ್ಪ, ಬೈರಾರೆಡ್ಡಿ, ದೇವರಾಜ್, ಕೃಷ್ಣಪ್ಪ, ರಾಜಪ್ಪ, ನಾಗರಾಜ್, ರಘುರಾಮರೆಡ್ಡಿ, ಮುನಿಯಪ್ಪ, ಈಶ್ವರರೆಡ್ಡಿ, ರಮಾಮಣಿ ಮತ್ತಿತರರು ಭಾಗವಹಿಸಿದ್ದರು.
For Daily Updates WhatsApp ‘HI’ to 7406303366
The post ಚಿತ್ರಾವತಿ ಜಲಾಶಯಕ್ಕೆ ಎಸ್.ಎಂ. ಕೃಷ್ಣ ಹೆಸರು: CPM ಪ್ರತಿಭಟನೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.