ನವದೆಹಲಿ, ಏಪ್ರಿಲ್ 1: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ LPG ಸಿಲಿಂಡರ್ ದರವನ್ನು (Commercial LPG cylinder) ಕಡಿಮೆ ಮಾಡಿದ್ದು, ಇದರಿಂದ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.
ಈ ಹೊಸ ದರವು ಇಂದು (ಏಪ್ರಿಲ್ 1)ರಿಂದ ಜಾರಿಗೆ ಬಂದಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹41 ಇಳಿಕೆಯಾಗಿದ್ದು, ದೆಹಲಿಯಲ್ಲಿ ಈಗ ₹1,762 ಕ್ಕೆ ಲಭ್ಯ.
ಪ್ರಮುಖ ನಗರಗಳಲ್ಲಿ ಪರಿಷ್ಕೃತ ದರ
- ಮುಂಬೈ: ₹1,714.50 (ಹಿಂದಿನ ₹1,755.50)
- ಕೋಲ್ಕತ್ತಾ: ₹1,872 (ಹಿಂದಿನ ₹1,913)
- ಚೆನ್ನೈ: ₹1,924.50 (ಹಿಂದಿನ ₹1,965.50)
ತೈಲ ಕಂಪನಿಗಳು ಪ್ರತಿ ತಿಂಗಳ 1ನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಿಸುತ್ತವೆ. ಮಾರ್ಚ್ 1 ರಂದು ವಾಣಿಜ್ಯ ಸಿಲಿಂಡರ್ ದರವನ್ನು ₹6 ಹೆಚ್ಚಿಸಲಾಗಿತ್ತು.
ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
- ದೆಹಲಿ: ₹803
- ಕೋಲ್ಕತ್ತಾ: ₹829
- ಮುಂಬೈ: ₹802.50
- ಚೆನ್ನೈ: ₹818.50
2022ರಲ್ಲಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿತ್ತು. ಏಪ್ರಿಲ್ 2022ರಲ್ಲಿ ₹249.50-₹268.50ರಷ್ಟು ಹೆಚ್ಚಾಗಿ, ದೆಹಲಿಯಲ್ಲಿ ₹2,406 ತಲುಪಿತ್ತು.