
Chikkaballapur : ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ಸದಾಶಿವನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಭವನವನ್ನು (Congress Office) ನಿರ್ಮಿಸಲು ಗುರುತಿಸಲಾದ ಜಾಗವನ್ನು ಸೋಮವಾರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪಕ್ಷದ ಟ್ರಸ್ಟ್ ಹೆಸರಿಗೆ ನೋಂದಾಯಿಸಲಾಗಿದೆ (Land Registration) . ಕೆಪಿಸಿಸಿ ಖಜಾಂಚಿ ವಿನಯ್ ಕಾರ್ತಿಕ್ ಮತ್ತು ಕೆಪಿಸಿಸಿ ಕಚೇರಿ ಕಾರ್ಯದರ್ಶಿ ನಾರಾಯಣ್ ಅವರು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.
ಜಿಲ್ಲಾ ಕೇಂದ್ರವಾವಾದಾಗಿನಿಂದ ಇಂದಿನವರೆಗೂ ಜಿಲ್ಲಾ ಕಾಂಗ್ರೆಸ್ ಕಚೇರಿಯು ಬಿಬಿ ರಸ್ತೆಯ ಖಾಸಗ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಇದು ತೀರಾ ಚಿಕ್ಕದಾಗಿದೆ. ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಲು ಸಹ ಕಿರಿದಾಗಿದೆ. ಈಗ ಸ್ವಂತ ಕಟ್ಟಡ ಸಾಧ್ಯವಾಗುತ್ತಿದೆ. ಯಲುವಳ್ಳಿ ರಮೇಶ್ ಅವರಿಗೆ ಸೇರಿದ ಬಡಾವಣೆಯಲ್ಲಿ 34 ಸಾವಿರ ಚದುರ ಅಡಿ ಸಿಎ ನಿವೇಶನವನು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಬೆಂಗಳೂರು ವಿಭಾಗದ ಸಂಯೋಜಕ ಎಂ. ರಾಜ್ ಕುಮಾರ್ ಅವರ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು. ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಡ್ಡಗಲ್ ಶ್ರೀಧರ್ ಹಾಗೂ ಮುಖಂಡರು ಫೆಬ್ರುವರಿಯಲ್ಲಿ ನಿವೇಶನದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಶ್ರಾವಣ ಮಾಸದಲ್ಲಿ ದೇಶದ 100 ಕಡೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಎಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೂಮಿ ಪೂಜೆ ನೆರವೇರಿಸುವರು. ಆಗ ಚಿಕ್ಕಬಳ್ಳಾಪುರದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ.
For Daily Updates WhatsApp ‘HI’ to 7406303366
The post ಜಿಲ್ಲಾ ಕಾಂಗ್ರೆಸ್ ಭವನಕ್ಕೆ ನಿವೇಶನ ನೋಂದಣಿ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.