Bengaluru: ಶಿಗ್ಗಾವಿ (Shiggavi) ವಿಧಾನಸಭೆ ಕ್ಷೇತ್ರದ (Shiggavi assembly constituency) ಕಾಂಗ್ರೆಸ್ ಟಿಕೆಟ್ (Congress ticket) ಘೋಷಣೆ ಮಾಡಿದೆ.
ಕಳೆದ ವಿಧಾನಸಭೆ ಚುನಾವಣೆಯ (assembly election) ಸಂದರ್ಭದಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿಗೆ (Ajjampir Qadri) ಟಿಕೆಟ್ ನಿರಾಕರಣೆ ಮಾಡಲಾಗಿತ್ತು.
ಇದೀಗ ಮತ್ತೊಮ್ಮೆ ಟಿಕೆಟ್ ನೀಡದೆ ಇರುವುದ ಖಾದ್ರಿ ಬಂಡಾಯಕ್ಕೆ ಕಾರಣವಾಗಿದೆ.
ಸ್ಥಳೀಯವಾಗಿ ಸಾಕಷ್ಟು ಪ್ರಭಾವ ಹೊಂದಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಹಿಂದೆ ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣವೇ ಕಾರಣ ಎಂಬ ಆರೋಪವೂ ಕೇಳಿ ಬರುತ್ತಿದೆ.
ಶಿಗ್ಗಾವಿ ಟಿಕೆಟ್‌ಗಾಗಿ ಅಜ್ಜಂಪೀರ್ ಸಾಕಷ್ಟು ಪ್ರಯತ್ನ ನಡೆಸಿದ್ದರು. ಡಿಕೆ ಶಿವಕುಮಾರ್ ಜೊತೆಗೆ ಆಪ್ತರಾಗಿರುವ ಖಾದ್ರಿ, ತಮ್ಮ ಬೆಂಬಲಿಗರ ಜೊತೆಗೆ ಡಿಕೆಶಿ ಮನೆಗೆ ಆಗಮಿಸಿ ಟಿಕೆಟ್‌ಗಾಗಿ ಅಂತಿಮ ಹಂತದ ಪ್ರಯತ್ನ ನಡೆಸಿದ್ದರು.
ಅಜ್ಜಂಪೀರ್ ಖಾದ್ರಿ ಸ್ಥಳೀಯವಾಗಿ ಪ್ರಬಲ ಅಭ್ಯರ್ಥಿ. ಎಲ್ಲಾ ಜಾತಿ ಧರ್ಮಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದವರು ಎಂಬ ಅಭಿಪ್ರಾಯವೂ ಇದೆ.
ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ಅವಕಾಶ ಕೋರಿದ್ದರು. ಆದರೆ, ಅವರಿಗೆ ಟಿಕೆಟ್ ಕೈತಪ್ಪಿಸಲಾಗಿತ್ತು.
ಇದಕ್ಕೆ ಜಮೀರ್ ಕಾರಣ ಎಂಬ ಆರೋಪವೂ ಕೇಳಿ ಬರುತ್ತಿದೆ. ಕಳೆದ ಬಾರಿಯೂ ಜಮೀರ್ ಆಪ್ತ ಯಾಸಿರ್ ಖಾನ್ ಪಠಾಣ್‌ಗೆ ಟಿಕೆಟ್ ನೀಡಲಾಗಿತ್ತು. ಆದರೆ, ಈ ಬಾರಿ ಬೊಮ್ಮಾಯಿ ಪುತ್ರನ ವಿರುದ್ಧ ಖಾದ್ರಿ ಸೂಕ್ತ ಅಭ್ಯರ್ಥಿ ಎಂದೇ ಬಿಂಬಿತವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದೆ.
ಶಿಗ್ಗಾವಿ ವಿಚಾರವಾಗಿ ಕಾಂಗ್ರೆಸ್ ಹೊಂದಾಣಕೆ ರಾಜಕಾರಣ ನಡೆಸುತ್ತಿದೆ ಎಂಬ ಆರೋಪ ಗಂಭೀರವಾಗಿ ಕೇಳಿಬಂದಿದೆ. ಶಿಗ್ಗಾವಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾಗಿದ್ದು, ಅಲ್ಲಿ ರಾಜ್ಯ ನಾಯಕರ ನಡುವಿನ ಹೊಂದಾಣಿಕೆಯ ಫಲವಾಗಿಯೇ ಪ್ರಭಾವಿ ಅಭ್ಯರ್ಥಿಯನ್ನು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿಸುತ್ತಿಲ್ಲ ಎಂಬ ಆರೋಪ ಸ್ಥಳೀಯವಾಗಿ ಕೇಳಿಬರುತ್ತಿದೆ.
ಹೀಗಿರುವಾಗ ವಾತಾವರಣ ಕಾಂಗ್ರೆಸ್ ಪರವಾಗಿದೆ. ಇಂತಹ ಸಂದರ್ಭದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಗೆಲುವು ಸಾಧ್ಯ ಎಂಬ ಅಭಿಪ್ರಾಯವೂ ಇದೆ.
ಆದರೆ, ರಾಜ್ಯ ನಾಯಕರ ಹೊಂದಾಣಿಕೆಯ ಫಲವಾಗಿ ಶಿಗ್ಗಾವಿಯಲ್ಲಿ ಖಾದ್ರಿಗೆ ಟಿಕೆಟ್ ನೀಡಲಿಲ್ಲ ಎಂಬ ಆರೋಪವನ್ನು ಅವರ ಬೆಂಬಲಿಗರು ಮಾಡುತ್ತಿದ್ದಾರೆ.