ಕಾಂಗ್ರೆಸ್ (Congress) ಪಕ್ಷ ತನ್ನ ಕಚೇರಿಯನ್ನು ಅಕ್ಬರ್ ರಸ್ತೆಯಿಂದ ಕೋಟ್ಲಾ ಮಾರ್ಗದಲ್ಲಿರುವ ಇಂದಿರಾ ಭವನಕ್ಕೆ ಸ್ಥಳಾಂತರಿಸಲು ನಿರ್ಧಾರ ಮಾಡಿದೆ. ಈ ನಿರ್ಧಾರದಿಂದ ನೂರಕ್ಕೂ ಹೆಚ್ಚು ನೌಕರರು ತಮ್ಮ ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಇವರಲ್ಲಿ ಕಾಯಂ ನೌಕರರು, ದಿನಗೂಲಿ ನೌಕರರು ಮತ್ತು ತಾತ್ಕಾಲಿಕ ಕೆಲಸಗಾರರು ಇದ್ದಾರೆ.
ರಾಹುಲ್ ಗಾಂಧಿ ಅವರ ಮೇಲೆ ಕೆಲವು ನೌಕರರಿಗೆ ನಂಬಿಕೆ ಇದ್ದರೂ, ಕಚೇರಿ ಸ್ಥಳಾಂತರದ ನಂತರ ಅವರ ಸ್ಥಿತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಪಕ್ಷದ ಹಿರಿಯ ನಾಯಕರು, ಜೋತೆಗಿದ್ದರೂ, ನೌಕರರು ಮತ್ತು ನಾಯಕರ ನಡುವೆ ದೂರ ಹೆಚ್ಚಾಗಿದೆ.
ಹೊಸ ಕಚೇರಿಗೆ ಜನವರಿ 15, 2025 ರಿಂದ ಈ ನೌಕರರನ್ನು ಕರೆಯಲಾಗಿಲ್ಲ. ಅವರಿಗಾಗಿ ಸ್ವಯಂ ನಿವೃತ್ತಿ ಯೋಜನೆ, ಬೇರೆ ಉದ್ಯೋಗ ಅಥವಾ ಹಣಕಾಸಿನ ಪರಿಹಾರ ನೀಡದಿರುವುದು ಅವರ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.