Bengaluru: ಗುತ್ತಿಗೆದಾರರ ಸಂಘವು ಸರ್ಕಾರದ (government) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಾಕಿ ಹಣ ಪಾವತಿಯಾಗದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದೆ.
ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, (Deputy Chief Minister DK Shivakumar) ಸಚಿವರಾದ ಜಮೀರ್ ಅಹ್ಮದ್ ಖಾನ್, ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ, ಎನ್.ಎಸ್. ಬೋಸರಾಜು, ದಿನೇಶ್ ಗುಂಡೂರಾವ್ ಮತ್ತು ರಹೀಂ ಖಾನ್ ಅವರಿಗೆ ಖಾರದ ಪತ್ರ ಬರೆದಿದೆ.
ಸಂಚಿಕೆಯಲ್ಲಿ ಸಚಿವರ ಮತ್ತು ಅಧಿಕಾರಿಗಳ ವರ್ತನೆ ಕುರಿತು ಅಸಮಾಧಾನ ವ್ಯಕ್ತಪಡಿಸಲಾಗಿದ್ದು, ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಗುತ್ತಿಗೆದಾರರು ಸರ್ಕಾರದಿಂದ 32,000 ಕೋಟಿ ರೂ. ಹಣ ಪಾವತಿ ಬಾಕಿ ಇರುವುದಾಗಿ ಹೇಳಿದ್ದಾರೆ. ಈ ಪೈಕಿ ಬೃಹತ್ ನೀರಾವರಿ ಇಲಾಖೆಯೊಂದರಿಂದಲೇ 14,000 ಕೋಟಿ ರೂ. ಬಾಕಿ ಇದೆ.
ಗುತ್ತಿಗೆ ನೀಡುವಲ್ಲಿ ಕಮಿಷನ್ ನೀಡಬೇಕೆಂದು ಒತ್ತಾಯ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಗುತ್ತಿಗೆದಾರರ ಸಂಘದ ಹಂಗಾಮಿ ಅಧ್ಯಕ್ಷ ಜಗನ್ನಾಥ ಬಿ ಶೇಗಣಿ ಮಾಡಿದ್ದಾರೆ.
“ನಮ್ಮ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಸಚಿವರು ಅಥವಾ ಅಧಿಕಾರಿಗಳು ನಮ್ಮ ಪರ ನಿಲ್ಲುತ್ತಿಲ್ಲ. ಇದು ನಮಗೆ ನಂಬಿಕೆಯನ್ನು ಕಳೆಸುತ್ತಿದೆ,” ಎಂದು ಸಂಘ ಹೇಳಿದೆ.