Bidar: ಬೀದರ್ ನ ಪಶುವೈದ್ಯಕೀಯ (Veterinary University) ಮೀನುಗಾರಿಕೆ ವಿಜ್ಞಾನಿಗಳ ವಿವಿಯಲ್ಲಿ ಭ್ರಷ್ಟಾಚಾರ ಸಂಬಂಧದ ಆರೋಪ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ಕರ್ನಾಟಕದ 69 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ದಾಳಿ ವಿವಿಯ ಅಧಿಕಾರಿಗಳು, ಸಿಬ್ಬಂದಿ ಮನೆಗಳು ಮತ್ತು ಕಚೇರಿಗಳ ಮೇಲೆ ಮಾಡಲಾಯಿತು. ಭ್ರಷ್ಟಾಚಾರ ದೂರು ಬೀದರ್ ಲೋಕಾಯುಕ್ತ ಕಚೇರಿಗೆ ಸಲ್ಲಿತ್ತು. ಬೆಂಗಳೂರಿನ ವೆಂಕಟ್ ರೆಡ್ಡಿ ಈ ದೂರು ನೀಡಿದ್ದರು.
2021ರಲ್ಲಿ ವಿವಿಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮನೆಗಳು, ಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಯುತ್ತಿದೆ. ದಾಳಿ ಲೋಕಾಯುಕ್ತ ಎಡಿಜಿಪಿ ಮನೀಶ್ ಕರ್ಬಿಕರ್ ಹಾಗೂ ಐಜಿ ಮಾರ್ಗದರ್ಶನದಲ್ಲಿ ನಡೆದಿದೆ.
ದಾಳಿ ನಡೆದ ಸ್ಥಳಗಳು
- ಬೀದರ್: 24 ಸ್ಥಳಗಳು
- ಬೆಂಗಳೂರು: 31 ಸ್ಥಳಗಳು
- ಕೊಪ್ಪಳ: 2 ಸ್ಥಳಗಳು
- ಚಿಕ್ಕಮಗಳೂರು: 2 ಸ್ಥಳಗಳು
- ಹಾಸನ, ರಾಮನಗರ, ಕೋಲಾರ, ಉಡುಪಿ ಸೇರಿದಂತೆ ರಾಜ್ಯಾದ್ಯಂತ: 69 ಸ್ಥಳಗಳು
2021 ಅಕ್ಟೋಬರ್ 4ರಂದು ಸುಮಾರು 35 ಕೋಟಿ ರೂ. ಹಗರಣವಾಗಿದೆ ಎಂದು ದೂರು ನೀಡಲಾಗಿತ್ತು. ತನಿಖೆಯಲ್ಲಿ 22 ಕೋಟಿ ರೂ. ಹಗರಣ ಪತ್ತೆಯಾಗಿದೆ.
ವಿಶ್ವವಿದ್ಯಾಲಯದ ಕಂಟ್ರೋಲರ್ ಸುರೇಶ್ ಸಹೋದರ ಮಲ್ಲಿಕಾರ್ಜುನ್ ಅವರ ಚಿಕ್ಕಮಗಳೂರಿನ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ನಗರದ ಕಲ್ಯಾಣನಗರದಲ್ಲಿ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಯಿತು. ಸುರೇಶ್ 2017ರಲ್ಲಿ ಬೀದರ್ ನ ಪಶುವೈದ್ಯಕೀಯ ಮೀನುಗಾರಿಕೆ ವಿಜ್ಞಾನಿಗಳ ವಿವಿಯಲ್ಲಿ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸಿದ್ದರು.