
ಜಪಾನ್ 2025 ರಲ್ಲಿ ಚಂದ್ರನ (Moon) ತಲುಪಲು ತಯಾರಾಗಿದೆ. ಭಾರತ, ಅಮೆರಿಕ, ರಷ್ಯಾ ಜೊತೆಗೆ ಜಪಾನ್ ಕೂಡ ತಮ್ಮ ಚಂದ್ರಯಾನ ಕಾರ್ಯಗಳಲ್ಲಿ ಮುಂದೆ ಇದೆ. ಭಾರತ ಚಂದ್ರಯಾನ-3 ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸ್ಮೂತ್ ಲ್ಯಾಂಡಿಂಗ್ ಸಾಧಿಸಿದೆ ಮತ್ತು 2040 ರೊಳಗೆ ಚಂದ್ರನಿಗೆ (Moon) ಮನುಷ್ಯನನ್ನು ಕಳುಹಿಸುವ ಗುರಿ ಹೊಂದಿದೆ. ಅಮೆರಿಕದ ಆರ್ಟೆಮಿಸ್ ಕಾರ್ಯಕ್ರಮ ಮತ್ತು ರಷ್ಯಾದ 2030 ರ ಯೋಜನೆಗಳು ಕೂಡ ಚಂದ್ರನಿಗೆ ಮಾನವರು ಇಳಿಯಲು ಸಹಾಯ ಮಾಡಲಿವೆ.
ಜಪಾನ್ ಖಾಸಗಿ ಬಾಹ್ಯಾಕಾಶ ಕಂಪನಿ ಐಸ್ಪೇಸ್ ತನ್ನ ‘ಮಿಷನ್ 2’ ನಡಿಯಲ್ಲಿ ಜೂನ್ 6 ರಂದು ಚಂದ್ರನ ಉತ್ತರ ಭಾಗದಲ್ಲಿರುವ ‘ಮೇರ್ ಫ್ರಿಗೋರಿಸ್’ ಎಂಬ ತಂಪಾದ ಸಮತಟ್ಟಾದ ಪ್ರದೇಶದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲು ಯೋಜನೆ ರೂಪಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಜೂನ್ 6 ರಂದು ಮಧ್ಯರಾತ್ರಿಯಿಂದ ಸ್ವಲ್ಪ ಮೊದಲು ಈ ಕಾರ್ಯ ನಡೆಯಲಿದೆ.
‘ರೆಸಿಲಿಯನ್ಸ್’ ಎಂಬ ಐಸ್ಪೇಸ್ ಲ್ಯಾಂಡರ್ ಯಶಸ್ವಿಯಾಗಿ ಇಳಿದರೆ, ಅದು ಚಂದ್ರನ ಮೇಲ್ಮೈಯಲ್ಲಿ ಸಣ್ಣ ರೋವರ್ ‘ಟೆನಾಷಿಯಸ್’ ಅನ್ನು ಬಿಡುಗಡೆ ಮಾಡಿ ವೈಜ್ಞಾನಿಕ ಉಪಕರಣಗಳೊಂದಿಗೆ ಕಾರ್ಯನಿರ್ವಹಿಸಲಿದೆ.
‘ಮೇರ್ ಫ್ರಿಗೋರಿಸ್’ ಎಂದರೆ ಚಂದ್ರನ ಉತ್ತರ ಭಾಗದ ‘ಶೀತಲ ಸಮುದ್ರ’ — ಇದು -153°C ತಾಪಮಾನವಿರುವ, ಸಮತಟ್ಟಾದ, ಬಸಾಲ್ಟ್ ಬಯಲು ಪ್ರದೇಶ. 1651 ರಲ್ಲಿ ಖಗೋಳಶಾಸ್ತ್ರಜ್ಞ ಜಿಯೋವಾನಿ ರಿಕೋಲಿ ಈ ಪ್ರದೇಶಕ್ಕೆ ಈ ಹೆಸರು ನೀಡಿದರು.
ಈ ರೀತಿಯ ಕಾರ್ಯಾಚರಣೆ ಯಶಸ್ವಿಯಾಗುವಲ್ಲಿ ಜಪಾನ್ ಮತ್ತು ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಇದು ದೊಡ್ಡ ಸಾಧನೆ ಆಗಲಿದೆ.