ಬೆಂಗಳೂರು: ಸೈಬರ್ ವಂಚನೆ ತಪ್ಪಿಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದರ ಬಳಿಕ ಸೆಪ್ಟೆಂಬರ್ 8 ರಂದು ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಪ್ರಣಬ್ ಮೊಹಂತಿಯವರನ್ನು ಡಿಐಜಿಯಾಗಿ ನೇಮಕ ಮಾಡಲಾಗಿದೆ.
ಕಮಾಂಡ್ ಸೆಂಟರ್ ನಾಲ್ಕು ವಿಂಗ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಸೈಬರ್ ಕ್ರೈಂ ವಿಂಗ್: ಸೈಬರ್ ಅಪರಾಧ ಪತ್ತೆ ಮಾಡುವುದು, ದೂರು ದಾಖಲಿಸಿ ತನಿಖೆ ನಡೆಸುವುದು.
ಸೈಬರ್ ಸೆಕ್ಯೂರಿಟಿ ವಿಂಗ್: ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣ ಮತ್ತು ಸಾಫ್ಟ್ವೇರ್ ಹ್ಯಾಕಿಂಗ್ ಪತ್ತೆ ಮಾಡುವುದು.
IDTU ವಿಂಗ್: ಅಪರಾಧಿಗಳ ಸ್ಥಳ ಪತ್ತೆ ಮಾಡುವುದು, ಸಾಮಾಜಿಕ ಜಾಲತಾಣ ಸಂಸ್ಥೆಗಳಿಂದ ಮಾಹಿತಿ ಪಡೆಯುವುದು, ಐಪಿ ಅಡ್ರೆಸ್ ಪತ್ತೆ ಮಾಡುವುದು.
ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಜನಜಾಗೃತಿ ದಳ: ಅಧಿಕಾರಿಗಳಿಗೆ ತರಬೇತಿ ನೀಡುವುದು, ಹೊಸ ತಂತ್ರಜ್ಞಾನ ತಿಳಿಸುವುದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಅರಿವು ಮೂಡಿಸುವುದು.
ಇದೆ ರೀತಿಯಲ್ಲಿ ಸೈಬರ್ ಕಮಾಂಡ್ ಸೆಂಟರ್ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನಲ್ಲಿ 45 ಸೈಬರ್ ಪೊಲೀಸ್ ಠಾಣೆಗಳು ಇವೆ. ಜಿಲ್ಲೆಗಳಲ್ಲಿ ದಾಖಲಾಗುವ ಪ್ರಕರಣಗಳು ಎಸ್ಪಿಗಳ ಅಧೀನದಲ್ಲಿ ತನಿಖೆಗೆ ಒಳಪಡುತ್ತವೆ. ಈಗಾಗಲೇ 16,000 ಪ್ರಕರಣಗಳು ಬಾಕಿ ಇವೆ ಮತ್ತು ಸೈಬರ್ ಅಪರಾಧದ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ರಾಜ್ಯ ಸರ್ಕಾರದ ಈ ನೂತನ ವ್ಯವಸ್ಥೆಯಿಂದ ಸೈಬರ್ ಅಪರಾಧ ತಡೆ ಸಾಧ್ಯವಾಗುತ್ತದೆಯೇ ನೋಡಬೇಕು.