Kurnool (Andhra Pradesh): ಕರ್ನೂಲ್ ಜಿಲ್ಲೆಯ ಜೊನ್ನಗಿರಿಯಲ್ಲಿ ದೇಶದ ಅತಿದೊಡ್ಡ ಖಾಸಗಿ ಚಿನ್ನ ಉತ್ಪಾದನಾ ಕಾರ್ಖಾನೆಯು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಜಿಯೋ ಮೈಸೂರು ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಈ ಕಾರ್ಖಾನೆ ಸ್ಥಾಪಿಸುತ್ತಿದೆ. ಈ ಕಂಪನಿಗೆ ಚಿನ್ನ, ಬೆಳ್ಳಿ ಮತ್ತು ಇತರ ಖನಿಜಗಳ ಗಣಿಗಾರಿಕೆ ಅನುಭವವಿದೆ.
ಹಲವು ವರ್ಷಗಳಿಂದ ವಿಳಂಬವಾಗಿದ್ದ ಯೋಜನೆ ಈಗ ಆರಂಭವಾಗಲಿದೆ. ಫೆಬ್ರವರಿಯಲ್ಲಿ ಸಾರ್ವಜನಿಕರೊಂದಿಗೆ ನಡೆದ ಸಂವಾದ, ಸರ್ಕಾರದ ಬೆಂಬಲ ಮತ್ತು ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ. ಇದರಿಂದ ಕಂಪನಿಯು ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧವಾಗಿದೆ.
ಸ್ಥಳ ಮತ್ತು ಅನುಮತಿ
- ಸ್ಥಳ: ತುಗ್ಗಲಿ ಮಂಡಲದ ಜೊನ್ನಗಿರಿ, ಪಗಿದಿರೈ, ಎರ್ರಗುಡಿ ಗ್ರಾಮಗಳು
- ಆವರಣ: 1,477.24 ಎಕರೆ
- ಪೂರ್ವ ಅನುಭವ: ಜಿಯೋ ಮೈಸೂರು ಮುಂಚೆ 35,000 ಚದರ ಕಿ.ಮೀ. ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಿದೆ
- ಬಂಡವಾಳ: 320 ಕೋಟಿ ರೂ.
2006 ರಲ್ಲಿ ಪರವಾನಗಿಗಳನ್ನು ಪಡೆದರೂ, ಚಿನ್ನದ ಗುಣಮಟ್ಟವನ್ನು ಪರೀಕ್ಷಿಸಲು ಮತ್ತು ಯೋಜನೆಯ ವ್ಯವಹಾರಿಕ ಸಾಧ್ಯತೆ ನಿರ್ಧರಿಸಲು 19 ವರ್ಷ ಬೇಕಾಯಿತು. ಈ ಅವಧಿಯಲ್ಲಿ ಮಿನಿ ಸ್ಥಾವರ ನಿರ್ಮಿಸಲಾಗಿತ್ತು. ನಂತರ ಪೂರ್ಣ ಪ್ರಮಾಣದ ಕಾರ್ಖಾನೆ ಸ್ಥಾಪಿಸಲಾಯಿತು.
ಉತ್ಪಾದನಾ ಸಾಮರ್ಥ್ಯ ಮತ್ತು ಮೀಸಲು
- ಅಂದಾಜು ನಿಕ್ಷೇಪ: 1 ಕೋಟಿ ಟನ್ ಚಿನ್ನದ ಖನಿಜ
- ಘಕಟದಲ್ಲಿ: 180 ಮೀಟರ್ ಆಳದಲ್ಲಿ 6.8 ಮಿಲಿಯನ್ ಟನ್ ಅದಿರು
- ಅನುಮತಿ ಅವಧಿ: 2043 ರವರೆಗೆ, ನಂತರ 50 ವರ್ಷಗಳ ವಿಸ್ತರಣೆ ಸಾಧ್ಯತೆ
ಆಧುನಿಕ ಕಾರ್ಖಾನೆ ಸಾಮರ್ಥ್ಯ
- ವಾರ್ಷಿಕ 4 ಲಕ್ಷ ಟನ್ ಅದಿರು ತೆಗೆಯುವುದು
- 3 ಲಕ್ಷ ಟನ್ ಸಂಸ್ಕರಣೆ
- ಆರಂಭಿಕವಾಗಿ ದಿನಕ್ಕೆ 1,000 ಟನ್ ಸಂಸ್ಕರಣೆ
- 1,000 ಟನ್ ಅದಿರು ~ 700 ಗ್ರಾಂ ಚಿನ್ನ
- 2-3 ವರ್ಷಗಳಲ್ಲಿ ವಾರ್ಷಿಕ 1,000 ಕೆಜಿ ಚಿನ್ನ ಉತ್ಪಾದನೆ ನಿರೀಕ್ಷೆ
ಉದ್ಯೋಗ ಮತ್ತು ಮೂಲಸೌಕರ್ಯ
- ನೇರ ಉದ್ಯೋಗ: 350 ಜನ
- ಪರೋಕ್ಷ ಉದ್ಯೋಗ: 500+ ಜನ
- ನೀರಿನ ಪೂರೈಕೆ: ಹಂದ್ರಿ-ನೀವಾ ಕಾಲುವೆಯಿಂದ 18 ಕಿ.ಮೀ ಪೈಪ್ಲೈನ್
ಜೋನ್ನಗಿರಿ ಚಿನ್ನದ ಕಾರ್ಖಾನೆಯು ಭಾರತದ ಅತಿದೊಡ್ಡ ಖಾಸಗಿ ಚಿನ್ನ ಉತ್ಪಾದನೆ ಕೇಂದ್ರವಾಗಲು ಸಜ್ಜಾಗಿದೆ. ಸ್ಥಳೀಯ ಆರ್ಥಿಕತೆ ಮತ್ತು ದೇಶದ ಖನಿಜ ಉತ್ಪಾದನೆಗೆ ಇದು ದೊಡ್ಡ ಕೊಡುಗೆ ನೀಡಲಿದೆ.