Bagepalli : ಬಾಗೇಪಲ್ಲಿ ಪಟ್ಟಣದ ಸಿಪಿಎಂ ಸುಂದರಯ್ಯ ಸಭಾಂಗಣದಲ್ಲಿ ಭಾನುವಾರ ಸಿಪಿಎಂ ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ (CPM District Sammelana logo release) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಕಮ್ಯುನಿಸ್ಟ್ (ಮಾಕ್ಸ್‌ವಾದಿ) ರಾಜ್ಯ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್ “ಬಾಗೇಪಲ್ಲಿ ತಾಲ್ಲೂಕಿನ ಕೊಂಡಂವಾರಿಪಲ್ಲಿ ಗ್ರಾಮದಲ್ಲಿ ನವೆಂಬರ್ 21 ಹಾಗೂ 22ರಂದು ಸಿಪಿಎಂ 18ನೇ ಜಿಲ್ಲಾ ಸಮ್ಮೇಳನ ನಡೆಯಲಿದ್ದು ಪ್ರಜಾಪ್ರಭುತ್ವದ ವ್ಯವಸ್ಥೆ ಸಂವಿಧಾನ ಹಾಗೂ ಕೃಷಿ, ಕೂಲಿಕಾರ್ಮಿಕರ, ಶೋಷಿತರ ಎಲ್ಲ ವರ್ಗದ ಜನರ ಸಮಸ್ಯೆ ಪರ ಹಾಗೂ ಆಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿ ನೀತಿ ವಿರುದ್ಧ ಚರ್ಚೆ ನಡೆಯಲಿದೆ.ಜಿಲ್ಲೆಯಾದ್ಯಂತ ಕಲಾಜಾಥಾಸಂಚರಿಸಲಿದೆ. 200ಕ್ಕೂ ಅಧಿಕ ಬೀದಿಗಳಲ್ಲಿ ಸಭೆ ಮಾಡಿ ಸಮ್ಮೇಳನದ ಮಹತ್ವ, ಜನ ವಿರೋಧಿನೀತಿ ಹಾಗೂ ಸಿಪಿಎಂ ಬಲಿಷ್ಠ ಸಂಘಟನೆ ಮಾಡಲು ಜನಜಾಗೃತಿ ಮೂಡಿಸಲಾಗುವುದು” ಎಂದು ತಿಳಿಸಿದರು.
ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸಿದ್ದಗಂಗಪ್ಪ, ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಬಿ.ಎನ್.ಮುನಿಕೃಷ್ಣಪ್ಪ, ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಬಿಳ್ಳೂರು ನಾಗರಾಜ್, ಸಾವಿತ್ರಮ್ಮ, ಚನ್ನರಾಯಪ್ಪ, ಅಶ್ವಥ್ಥಪ್ಪ, ಜಿ.ಕೃಷ್ಣಪ್ಪ, ಬಿ.ಎಚ್.ರಫೀಕ್, ಒಬಳರಾಜು, ಚಂಚುರಾಯನಪಲ್ಲಿಕೃಷ್ಣಪ್ಪ, ಗೋರ್ವಧನಚಾರಿ, ಗೊಲ್ಲಪಲ್ಲಿ ಮಂಜುನಾಥ್, ಜಿ.ಮುಸ್ತಾಫ, ಕೆ.ಮುನಿಯಪ್ಪ, ಜಹೀರ್ ಬೇಗ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post CPM ಜಿಲ್ಲಾ ಸಮ್ಮೇಳನದ ಲಾಂಛನ ಬಿಡುಗಡೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.