back to top
27 C
Bengaluru
Monday, September 1, 2025
HomeKarnatakaChikkaballapuraNovember 21 ಹಾಗೂ 22ರಂದು CPM ಜಿಲ್ಲಾ ಸಮ್ಮೇಳನ: Poster ಬಿಡುಗಡೆ

November 21 ಹಾಗೂ 22ರಂದು CPM ಜಿಲ್ಲಾ ಸಮ್ಮೇಳನ: Poster ಬಿಡುಗಡೆ

- Advertisement -
- Advertisement -

Bagepalli : November 21 ಹಾಗೂ 22ರಂದು ಪಟ್ಟಣದ ಹೊರವಲಯದ ಕೊಂಡಂವಾರಿಪಲ್ಲಿ SLN ಕಲ್ಯಾಣ ಮಂಟಪದಲ್ಲಿ ನಡೆಯಲಿರುವ CPM 18ನೇ ಜಿಲ್ಲಾ ಸಮ್ಮೇಳನದ (CPM District Sammelana) Poster ಗಳನ್ನು ಭಾನುವಾರ CPM ಮುಖಂಡರು ಪಟ್ಟಣದ ಸುಂದರಯ್ಯ ಭವನದಲ್ಲಿ ಬಿಡುಗಡೆಗೊಳಿಸಿದರು (Release).

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ಕೃಷ್ಣಾ ನದಿಯ ನೀರನ್ನು ಜಿಲ್ಲೆಯ ಎಲ್ಲಾ ಭಾಗಗಳಿಗೆ ಹರಿಸಬೇಕೆಂದು ಆಗ್ರಹಿಸಿ, ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಮತ್ತು ರೈತರಿಗೆ, ಬಡವರಿಗೆ ಉದ್ಯೋಗ, ಭೂಮಿ, ಮನೆ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

“ಸಿಪಿಎಂ ಕಳೆದ 70 ವರ್ಷಗಳಿಂದ ಜಿಲ್ಲೆ ಮತ್ತು ತಾಲ್ಲೂಕುಗಳ ಅಭಿವೃದ್ಧಿಗೆ ಹೋರಾಟ ಮಾಡುತ್ತಿದ್ದು, ದುಡಿಯುವ ವರ್ಗ, ಕೃಷಿಕರು, ಹಾಗೂ ಜನಸಾಮಾನ್ಯರ ಹಕ್ಕುಗಳನ್ನು ರಕ್ಷಿಸುತ್ತದೆ” ಎಂದು ಅವರು ತಿಳಿಸಿದರು.

ಮುನಿವೆಂಕಟಪ್ಪ ಅವರು, “ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಜನರು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಕೃಷ್ಣಾ ನದಿಯ ನೀರಿನ ಹಂಚಿಕೆಗೂ ಸಂಬಂಧಿಸಿದ ಸಮಸ್ಯೆಗಳಿವೆ. ಆಂಧ್ರಪ್ರದೇಶದಲ್ಲಿ ಚಿಲಮತ್ತೂರಿಗೆ ನೀರು ಕಾಲುವೆ ಮೂಲಕ ಹರಿದಿದ್ದರೂ, ಇದನ್ನು ಜಿಲ್ಲೆಗೆ ಸರಿಯಾಗಿ ಹಂಚಲಾಗಿಲ್ಲ” ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ರೈತರು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು, ದಲಿತರು, ಕೃಷಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರಗತಿಪರ ಸಂಘಟನೆಗಳು ಹಾಗೂ ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ. ರಾಘವುಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್. ಉಮೇಶ್, ಸಮಿತಿ ಕಾರ್ಯದರ್ಶಿ ಯು. ಬಸವರಾಜು, ರಾಜ್ಯ ಸಮಿತಿ ಸದಸ್ಯ ಜಿ.ಸಿ. ಬಯ್ಯಾರೆಡ್ಡಿ, ಡಾ. ಅನಿಲ್ ಕುಮಾರ್, ಎಂ.ಪಿ. ಮುನಿವೆಂಕಟಪ್ಪ, ಜಯರಾಮರೆಡ್ಡಿ, ಕಾಂ. ಎಂ.ಎನ್. ರಘುರಾಮರೆಡ್ಡಿ, ಸಿದ್ದಗಂಗಪ್ಪ, ನಾಗರಾಜು, ಸಾವಿತ್ರಮ್ಮ ಸೇರಿದಂತೆ ಅನೇಕ ಮುಖ್ಯಸ್ಥರು ಈ ಸಮ್ಮೇಳನದಲ್ಲಿ ಭಾಗವಹಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಎಂ.ಎನ್. ರಘುರಾಮರೆಡ್ಡಿ, ವಾಲ್ಮೀಕಿ ಅಶ್ವತ್ಥಪ್ಪ, ಒಬಳರಾಜು, ಜಿ. ಕೃಷ್ಣಪ್ಪ, ಕೆ. ಮುನಿಯಪ್ಪ, ಬಿ.ಎಚ್. ರಫೀಕ್, ಲಕ್ಷ್ಮಣರೆಡ್ಡಿ, ಸೋಮಶೇಖರ್ ಮತ್ತು ಇನ್ನಿತರ ಸಿಪಿಎಂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

The post November 21 ಹಾಗೂ 22ರಂದು CPM ಜಿಲ್ಲಾ ಸಮ್ಮೇಳನ: Poster ಬಿಡುಗಡೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page