Bagepalli : ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಲ್ಲಿ ಸಿಪಿಎಂ ಸಭೆ (CPM Meeting) ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ ಮುನಿವೆಂಕಟಪ್ಪ ಮಾತನಾಡಿ ” ಕೆಲ ರಾಜಕೀಯ ಕಾರಣಗಳಿಂದ ಹಲವು ವರ್ಷಗಳಿಂದ ರಾಜಕೀಯವಾಗಿ ದೂರ ಉಳಿದಿದ್ದ ಸಿಪಿಎಂ ಮುಖಂಡರು ಮತ್ತೆ ಒಗ್ಗೂಡಿದ್ದು, ಶ್ರಮಿಕರ ಪರ ನಿರಂತರ ಹೋರಾಟಕ್ಕೆ ಆಣಿಯಾಗಿದ್ದಾರೆ. ದೇಶದಲ್ಲಿ ಜನರ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಶಕ್ತಿ ಬಲಹೀನವಾಗಿದೆ. ಬಿಜೆಪಿ ಕೋಮು ಸಂಘರ್ಷಕ್ಕೆ ಮುಂದಾಗಿದೆ. ಇದರಿಂದ ಜನರು ಸಿಪಿಎಂನ್ನು ಬಲಿಷ್ಠಗೊಳಿಸಲು ಮುಂದಾಗಿದ್ದಾರೆ” ಎಂದರು.
ಸಭೆಯಲ್ಲಿ ಸಿಪಿಎಂ ತಾಲ್ಲೂಕು ಸಮಿತಿ ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಪಟ್ಟಣ ಸಮಿತಿ ಕಾರ್ಯದರ್ಶಿ ಅಶ್ವತ್ಥಪ್ಪ, ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್, ಚನ್ನರಾಯಪ್ಪ,ಸದಸ್ಯ ನರಸಿಂಹರೆಡ್ಡಿ, ನಲ್ಲಪರೆಡ್ಡಿ, ಪಲ್ಲಿಚಂದ್ರ ಶೇಖರರೆಡ್ಡಿ, ಮಾರಗಾನಕುಂಟೆ ಬಾಬು, ಕೊಲಿಂಪಲ್ಲಿ ಚಲಪತಿ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ದೇಶದಲ್ಲಿ BJP ಕೋಮು ಸಂಘರ್ಷಕ್ಕೆ ಮುಂದಾಗಿದೆ : CPM ಜಿಲ್ಲಾ ಕಾರ್ಯದರ್ಶಿ appeared first on Chikkaballapur | ಚಿಕ್ಕಬಳ್ಳಾಪುರ.