Lucknow: ಮುಂಬೈ ಮೂಲದ ಆಟಗಾರನಾದ ಮುಶೀರ್ ಖಾನ್ (Musheer Khan) ಇರಾನಿ ಕಪ್ ಟೈ (Irani Cup tie) ಪರವಾಗಿ ಆಡಲು ಕಾನ್ಪುರದಿಂದ ಲಕ್ನೋಗೆ ತನ್ನ ಕೋಚ್ ಆಗಿರುವ ತಂದೆ ನೌಶಾದ್ ಖಾನ್ (Naushad Khan) ಅವರೊಂದಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಅಪಘಾತಕ್ಕೀಡಾಗಿ (Accident) ಮೂಳೆ ಮುರಿತಕ್ಕೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.
ಪ್ರತಿಭಾನ್ವಿತ ರಣಜಿ ಪ್ಲೇಯರ್ (Ranji player) ಆಗಿರುವ 19 ವರ್ಷದ ಮುಶೀರ್ ಖಾನ್ (Musheer Khan) ಈವರೆಗೆ 9 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. ಇತ್ತೀಚೆಗೆ ದುಲೀಪ್ ಟ್ರೋಫಿಯಲ್ಲಿ ಭಾರತ – ಎ (India-A) ತಂಡದ ವಿರುದ್ಧ 181 ರನ್ ಗಳಿಸಿ ಮಿಂಚಿದ್ದರು.
ಮುಂದಿನ ಅಕ್ಟೋಬರ್ 1 ರಿಂದ 5ರ ವರೆಗೆ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ(Atal Bihari Vajpayee Ekna Cricket Stadium) ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮುಂಬೈನ ಇರಾನಿ ಕಪ್ ಟೈ ವಿರುದ್ಧ ರಣಜಿ (Ranji Trophy) ನಡೆಯಲಿದೆ.
ಅಪಘಾತಕ್ಕೀಡಾಗಿರುವ ಮುಶೀರ್ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಮತ್ತೊಂದು ವರದಿಯ ಪ್ರಕಾರ, ಕುತ್ತಿಗೆಗೆ ಭಾಗಕ್ಕೆ ಗಾಯವಾಗಿರುವುದರಿಂದ ಮೂರು ತಿಂಗಳ ಕಾಲ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.