Kolkata: ಅರ್ಜೆಂಟೀನಾದ ಫುಟ್ಬಾಲ್ (football) ದಿಗ್ಗಜ ಲಿಯೋನೆಲ್ ಮೆಸ್ಸಿ (Lionel Messi) ಡಿಸೆಂಬರ್‌ನಲ್ಲಿ ಭಾರತಕ್ಕೆ ಬರಲಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಮೆಸ್ಸಿ ಕೋಲ್ಕತಾ, ಅಹಮದಾಬಾದ್, ಮುಂಬೈ ಹಾಗೂ ನವದೆಹಲಿಗೆ ಭೇಟಿ ನೀಡಲಿದ್ದಾರೆ.
ಮೆಸ್ಸಿಯ ಪ್ರವಾಸ
ಡಿಸೆಂಬರ್ 12: ಮೆಸ್ಸಿ ಕೋಲ್ಕತಾಕ್ಕೆ ಆಗಮಿಸಲಿದ್ದಾರೆ.
ಡಿಸೆಂಬರ್ 13: ಕೋಲ್ಕತಾದಲ್ಲಿ 70 ಅಡಿ ಎತ್ತರವಿರುವ ತಮ್ಮ ಪ್ರತಿಮೆಯ ಅನಾವರಣ ಮಾಡಲಿದ್ದಾರೆ. ಬಳಿಕ ಸೌರವ್ ಗಂಗೂಲಿ ಮತ್ತು ಲಿಯಾಂಡರ್ ಪೇಸ್ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಅಹಮದಾಬಾದ್‌ನಲ್ಲಿ ಅದಾನಿ ಸಂಸ್ಥೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಿಸೆಂಬರ್ 14: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ತಾರಾ ಕ್ರಿಕೆಟಿಗರ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ನಂತರ ಭಾರತೀಯ ಫುಟ್ಬಾಲ್ ತಂಡವನ್ನು ಭೇಟಿಯಾಗಲಿದ್ದಾರೆ.
ಡಿಸೆಂಬರ್ 15: ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಂದು ನಗರದಲ್ಲೂ ಅವರು ಮಕ್ಕಳಿಗೆ 15-20 ನಿಮಿಷ ಕಾಲ ಸಲಹೆ ನೀಡಲಿದ್ದಾರೆ.
ಇತರ ವಿಷಯಗಳು
- ಮೆಸ್ಸಿ ಕ್ರಿಕೆಟ್ ದಂತಕಥೆಗಳಾದ ಧೋನಿ, ಕೊಹ್ಲಿ, ಸಚಿನ್ ಅವರ ಜೊತೆ ಕ್ರಿಕೆಟ್ ಆಡಲಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿವೆ.
- ಇನ್ನು ರಿಲಯನ್ಸ್ ನ ಫುಟ್ಬಾಲ್ ಸಂಸ್ಥೆ ಎಫ್ಎಸ್ಡಿಎಲ್ ಮತ್ತು ಎಐಎಫ್ಎಫ್ ನಡುವಿನ ಒಪ್ಪಂದ ತಕರಾರು ಹಿನ್ನೆಲೆ, ಈ ವರ್ಷ ಇಂಡಿಯನ್ ಸೂಪರ್ ಲೀಗ್ ನಡೆಯದಿರುವ ಸಾಧ್ಯತೆಯೂ ಇದೆ.
- ಅಂತೆಯೇ, ಆ.14ರಂದು ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ಭಾರತ-ಸಿಂಗಾಪುರ ನಡುವಿನ 2027 ಎಷ್ಯನ್ ಕಪ್ ಅರ್ಹತಾ ಪಂದ್ಯ ನಡೆಯುವ ಸಾಧ್ಯತೆ ಇದೆ.
ಇದು ಇನ್ನೂ ಎಎಫ್ಸಿ ವತಿಯಿಂದ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ಆದರೆ ನಿರೀಕ್ಷೆ ಜೋರಾಗಿದೆ.







