Davanagere: ಜಿಲ್ಲೆಯ ಬೇತೂರು ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ(Ganesha procession) ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ (Davanagere Stone Pelting Case) ಸಂಬಂಧಿಸಿದಂತೆ 18 ಜನರಿಗೆ ನ್ಯಾಯಾಧೀಶರಾದ ಪ್ರಶಾಂತ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಸಮಿತಿಯ 8 ಜನ ಸೇರಿ ಎರಡು ಕೋಮಿನ ಒಟ್ಟು 18 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳ ವಿಚಾರಣೆ ಬಳಿಕ 18 ಜನರಿಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ (Judicial Custody) ವಿಧಿಸಿದರು. ಅಶೋಕ ರೋಡ್, ಹಾಸಭಾವಿ ಸರ್ಕಲ್ ಸೇರಿದಂತೆ ಹಳೇ ದಾವಣಗೆರೆಯ ಹಲವು ಏರಿಯಾಗಳು ಉದ್ವಿಘ್ನಗೊಂಡಿವೆ. ಘಟನೆಯಲ್ಲಿ ಹಲವು ಪೊಲೀಸ್ (Karnataka Police) ಸಿಬ್ಬಂದಿಗೂ ಗಾಯಗಳಾಗಿವೆ.
ದಾವಣಗೆರೆಯಲ್ಲಿ ಬಾವುಟ ಕಟ್ಟುವ ವಿಚಾರಕ್ಕೆ ಹಿಂದೆ ಗಲಾಟೆ ನಡೆದಿತ್ತು. ಈ ವೇಳೆ ಹಿಂದೂ ಮುಖಂಡ ಸತೀಶ್ ಪೂಜಾರಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಗಾಂಧಿನಗರ ನಮ್ಮದು, ಗಾಂಧಿನಗರ ಜನರ ಮೈಮುಟ್ಟಿದ್ರೆ ಸುಮ್ಮನೆ ಇರುವುದಿಲ್ಲ. ಆಜಾದ್ ನಗರಕ್ಕೆ ನುಗ್ತೀವಿ ಅಂತ ಮಾಡಿದ್ದ ಭಾಷಣವೇ ಗಲಭೆಗೆ ಕಾರಣ ಅಂತ ಹೇಳಲಾಗುತ್ತಿದೆ.