New Delhi: ಯೆಮೆನ್ ದೇಶದಲ್ಲಿ ಜೈಲಿನಲ್ಲಿ ಇದ್ದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ರದ್ದುಪಡಿಸಲಾಗಿದೆ ಎಂದು ಭಾರತೀಯ ಗ್ರ್ಯಾಂಡ್ ಮುಫ್ತಿ ಕಚೇರಿ ತಿಳಿಸಿದೆ. ಸನಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
2018ರಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಂದ ಆರೋಪದಲ್ಲಿ ನಿಮಿಷಾ ಅವರನ್ನು ಜೈಲು ಹಾಕಲಾಗಿತ್ತು. ಜುಲೈ 16ರಂದು ಗಲ್ಲಿಗೇರಿಸಲು ನಿರ್ಧಾರವಾಗಿತ್ತು. ಆದರೆ ಭಾರತ ಸರ್ಕಾರ ಮತ್ತು ಭಾರತೀಯ ಗ್ರ್ಯಾಂಡ್ ಮುಫ್ತಿ ಅವರ ಜಂಟಿ ಪ್ರಯತ್ನದಿಂದ ಮರಣದಂಡನೆಯನ್ನು ಮೊದಲು ತಾತ್ಕಾಲಿಕವಾಗಿ ತಡೆದು, ಈಗ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಇದಕ್ಕೆ ವಿರುದ್ಧವಾಗಿ ಕೊಲೆಯಾದ ವ್ಯಕ್ತಿಯ ಸಹೋದರ ಫತಾಹ್, ಈ ನಿರ್ಧಾರಕ್ಕೆ ಕುಟುಂಬದ ಒಪ್ಪಿಗೆ ಇಲ್ಲ ಎಂದು ಹೇಳಿದರು. ತಾನೇ ಸುಳ್ಳು ಸುದ್ದಿ ಹರಡಲಾಗಿದೆ ಮತ್ತು ಧರ್ಮದ ಹೆಸರಿನಲ್ಲಿ ಅಪರಾಧವನ್ನು ಮರೆಮಾಚಲಾಗದು ಎಂದು ಫೇಸ್ಬುಕ್‌ನಲ್ಲಿ ಹೇಳಿದರು.
ವಿದೇಶಾಂಗ ಇಲಾಖೆ ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ನಿಮಿಷಾ ಅವರನ್ನು ರಕ್ಷಿಸಲು ಎಲ್ಲಾ ಕಾನೂನು ನೆರವು ನೀಡುತ್ತಿದೆ. ವಕೀಲರ ಸಹಾಯದಿಂದ ಷರಿಯಾ ಕಾನೂನು ಪ್ರಕಾರ ಕ್ಷಮೆ ಪಡೆಯಲು ಪ್ರಯತ್ನಿಸಲಾಗಿದೆ.
ನಿಮಿಷಾ ಅವರು ತರಬೇತಿ ಪಡೆದ ನರ್ಸ್ ಆಗಿದ್ದು, ಕೆಲವು ವರ್ಷಗಳಿಂದ ಯೆಮೆನ್ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಯೆಮೆನ್ನಲ್ಲಿ ವ್ಯವಹಾರ ನಡೆಸಲು ಭಾರತೀಯರಿಗೆ ಅವಕಾಶವಿಲ್ಲದ ಕಾರಣ, ಅವರು ಸ್ಥಳೀಯ ವ್ಯಕ್ತಿ ಮಹ್ದಿಯ ಸಹಾಯದಿಂದ ಕ್ಲಿನಿಕ್ ತೆರೆಯಲಿದ್ದರು. ಆದರೆ ಮಹ್ದಿಯು ಅವಳಿಗೆ ಅನ್ಯಾಯ ಮಾಡಿದ ಹಿನ್ನೆಲೆಯಲ್ಲಿ, ತನ್ನ ಪಾಸ್‌ಪೋರ್ಟ್ ಹಿಂತೆಗೆದುಕೊಳ್ಳಲು ಈಜ್ಞೆಕ್ಷನ್ ನೀಡಿದಾಗ ಅಪಘಾತವಾಗಿ ಅವರ ಮರಣ ಸಂಭವಿಸಿದ್ದಂತೆ. ಬಳಿಕ ನಿಮಿಷಾ ಅವರನ್ನು ಬಂಧಿಸಿ, 2018ರಲ್ಲಿ ಶಿಕ್ಷೆ ವಿಧಿಸಲಾಗಿತ್ತು.
ಈಗ, ಭಾರತ ಸರ್ಕಾರದ ಮತ್ತು ಮಾನವೀಯ ಚಿಂತನೆಯ ಹಿನ್ನೆಲೆಯಲ್ಲಿ ಮರಣದಂಡನೆ ರದ್ದಾಗಿದೆ ಎಂಬುದು ಮುಖ್ಯ ಸುದ್ದಿಯಾಗಿದೆ.