Home News Deepika Padukone: ಭಾರತದೆಲ್ಲೆಡೆ 75 Badminton ಕೇಂದ್ರಗಳು ಆರಂಭ

Deepika Padukone: ಭಾರತದೆಲ್ಲೆಡೆ 75 Badminton ಕೇಂದ್ರಗಳು ಆರಂಭ

181
Padukone School of Badminton

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ತಮ್ಮ ತಂದೆ ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆಯ 70ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಅವರು ಸ್ಥಾಪಿಸಿರುವ ‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ (PSB-Padukone School of Badminton) ಈಗಾಗಲೇ ಬೆಂಗಳೂರಿನ ಜೊತೆಗೆ ಮುಂಬೈ, ದೆಹಲಿ, ಪುಣೆ, ಮೈಸೂರು, ನಾಸಿಕ್, ಪಾಣಿಪತ್ ಮುಂತಾದ 18 ನಗರಗಳಲ್ಲಿ 75ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಆರಂಭಿಸಿದೆ.

ದೀಪಿಕಾ ತಮ್ಮ Instagram ನಲ್ಲಿ, “ನಾನು ಬ್ಯಾಡ್ಮಿಂಟನ್ ಆಟದೊಂದಿಗೆ ಬೆಳೆದವಳು. ಈ ಕ್ರೀಡೆ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಸಹಾಯಕ. PSB ಮೂಲಕ ಎಲ್ಲಾ ವರ್ಗದ ಜನರಿಗೆ ಬ್ಯಾಡ್ಮಿಂಟನ್ ನ ಶಿಸ್ತು ಹಾಗೂ ಖುಷಿಯೊಂದಿಗೆ ಕಲಿಸಲು ನಾವು ಬದ್ಧರಾಗಿದ್ದೇವೆ. ಅಪ್ಪಾ, ನೀವು 70ರಲ್ಲೂ ಈ ಕ್ರೀಡೆಗೆ ಮೀಸಲಿದ್ದೀರಿ. ಹುಟ್ಟುಹಬ್ಬದ ಶುಭಾಶಯಗಳು!” ಎಂದು ಬರೆದು ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.

ಪ್ರಕಾಶ್ ಪಡುಕೋಣೆ ಕೂಡ ಈ ಕುರಿತು ತಮ್ಮ ಭಾವನೆ ಹಂಚಿಕೊಂಡು, “ಕ್ರೀಡೆ ಜೀವನದ ಭಾಗವಾಗಬೇಕು. ಶಿಸ್ತು, ಸ್ಥಿತಿಸ್ಥಾಪಕತೆ ಮತ್ತು ಗೆಲ್ಲುವ ಮನೋಭಾವ ಹೆಚ್ಚಿಸಬೇಕು. PSB ಮೂಲಕ ಉತ್ತಮ ತರಬೇತಿಯನ್ನು ಎಲ್ಲರಿಗೂ ತಲುಪಿಸಲು ಮತ್ತು ಭವಿಷ್ಯದ ಆಟಗಾರರನ್ನು ತಯಾರು ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದರು.

ಈ ವರ್ಷದ ಅಂತ್ಯಕ್ಕೆ PSB 100 ಕೇಂದ್ರಗಳು, ಹಾಗೂ 2027ರೊಳಗೆ 250 ಕೇಂದ್ರಗಳ ಗುರಿಯನ್ನು ಹೊಂದಿದೆ. ದೀಪಿಕಾ ಸಂಸ್ಥಾಪಕಿ, ಅವರ ತಂದೆ ಪ್ರಕಾಶ್ ಮಾರ್ಗದರ್ಶಕರಾಗಿ ಇದರ ಪ್ರಮುಖರಾಗಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page