Delhi, India : ಹೊಸ Omicron Covid-19 ರೂಪಾಂತರವು ಸಮುದಾಯದಲ್ಲಿ ಹರಡಿದೆಯೇ ಎಂದು ಖಚಿತಪಡಿಸಿಕೊಳ್ಳಲು ದೆಹಲಿಯಲ್ಲಿ ಬುಧವಾರದಿಂದ ಎಲ್ಲಾ COVID-19 ಸೋಂಕಿತ ಜನರ ಮಾದರಿಗಳ Genome Sequencing ಮಾಡಲಾಗುವುದೆಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯು ದಿನಕ್ಕೆ ಸುಮಾರು 100-125 ಪ್ರಕರಣಗಳನ್ನು ದಾಖಲಿಸುತ್ತಿದ್ದು, ಪ್ರತಿದಿನ 400-500 ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ.
ಲೋಕನಾಯಕ್ ಆಸ್ಪತ್ರೆ (Lok Nayak Hospital) ಮತ್ತು ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್‌ನಲ್ಲಿ (Institute of Liver and Biliary Sciences) ದೆಹಲಿ ಸರ್ಕಾರ ನಡೆಸುತ್ತಿರುವ ಲ್ಯಾಬ್‌ಗಳು ಪ್ರತಿ ದಿನ 100 ಮಾದರಿಗಳನ್ನು ಸೀಕ್ವೆನ್ಸ್ ಮಾಡಬಹುದು. ದೆಹಲಿಯ ಎರಡು ಕೇಂದ್ರ-ಚಾಲಿತ ಲ್ಯಾಬ್‌ಗಳು ದಿನಕ್ಕೆ 200-300 ಮಾದರಿಗಳನ್ನು ಸೀಕ್ವೆನ್ಸ್ ಮಾಡಬಹುದು. ಒಟ್ಟಾರೆ, ಒಂದು ದಿನದಲ್ಲಿ 400-500 ಮಾದರಿಗಳನ್ನು ವಿಶ್ಲೇಷಿಸಬಹುದು ಎಂದು ಜೈನ್ ಹೇಳಿದರು.