Delhi : ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, (Delhi Election Result) ಬಿಜೆಪಿ ಬಹುಮತದ ಅಂಚನ್ನು ದಾಟುತ್ತಿದ್ದಂತೆಯೇ, ಪಕ್ಷದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಶುರುವಾಗಿದೆ. ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಬಿಜೆಪಿ ನಾಯಕ ವೀರೇಂದ್ರ ಸಚ್ದೇವ್ ತಿಳಿಸಿದ್ದಾರೆ.
ಸಿಎಂ ಅಭ್ಯರ್ಥಿಗಳ ಪೈಕಿ ಪ್ರಮುಖ ಹೆಸರುಗಳು
ಪರ್ವೇಶ್ ವರ್ಮಾ: ದೆಹಲಿಯ ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ನವದೆಹಲಿ ಕ್ಷೇತ್ರದಿಂದ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದಾರೆ.
ರಮೇಶ್ ಬಿಧುರಿ: ಚುನಾವಣಾ ಪ್ರಚಾರದ ಸಮಯದಲ್ಲಿ ಎಎಪಿ ಅವರನ್ನು “ಬಿಜೆಪಿಯ ಸಿಎಂ ಮುಖ” ಎಂದು ಹೇಳಿದ್ದಾರೆ. ಅವರು ಕಲ್ಕಾಜಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.
ಕೈಲಾಶ್ ಗಹ್ಲೋಟ್: ಬಿಜ್ವಾಸನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಗಹ್ಲೋಟ್, ಮುಖ್ಯಮಂತ್ರಿಯಾಗಲು ಸಮರ್ಥ ಅಭ್ಯರ್ಥಿ ಎನ್ನಲಾಗುತ್ತಿದೆ.
ಕಪಿಲ್ ಮಿಶ್ರಾ: ಕರವಾಲ್ ನಗರದಿಂದ ಸ್ಪರ್ಧಿಸಿರುವ ಮಿಶ್ರಾ, ಪ್ರಾರಂಭಿಕ ಲೆಕ್ಕಾಚಾರದ ಪ್ರಕಾರ ಮುನ್ನಡೆಯಲ್ಲಿದ್ದಾರೆ.
ವಿಜೇಂದರ್ ಗುಪ್ತಾ: ದೆಹಲಿ ಬಿಜೆಪಿ ಹಿರಿಯ ನಾಯಕನಾಗಿ, 2015 ಮತ್ತು 2020ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಮುಂದಿನ ಸಿಎಂ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿ ಮುನ್ನಡೆಯಲ್ಲಿದ್ದಾರೆ.
ಬಿಜೆಪಿ ಯಾವ ನಾಯಕರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತದೆ ಎಂಬ ಕುತೂಹಲ ಮುಂದುವರಿದಿದೆ!