back to top
23.3 C
Bengaluru
Tuesday, September 16, 2025
HomeIndiaNew DelhiDelhi Election Results: ಆಪ್ ಗೆಲುವಿನ ಹ್ಯಾಟ್ರಿಕ್ ಇಲ್ಲವೇ ಕಮಲ ಅರಳುತ್ತಾ?

Delhi Election Results: ಆಪ್ ಗೆಲುವಿನ ಹ್ಯಾಟ್ರಿಕ್ ಇಲ್ಲವೇ ಕಮಲ ಅರಳುತ್ತಾ?

- Advertisement -
- Advertisement -


Delhi : ದೆಹಲಿಯ ವಿಧಾನಸಭಾ ಚುನಾವಣೆ (Delhi assembly elections) ಫೆಬ್ರವರಿ 5ರಂದು ನಡೆಯಿತು. ಮತ ಎಣಿಕೆ ಇಂದು (ಫೆಬ್ರವರಿ 8) ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಈ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (BJP) ಮತ್ತು ಕಾಂಗ್ರೆಸ್ ಮುಖ್ಯ ಸ್ಪರ್ಧಿಗಳಾಗಿವೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಬಿಜೆಪಿ ಬಹುಮತ ಪಡೆಯಲಿದೆ ಎಂಬ ನಿರೀಕ್ಷೆ ಇದೆ. ಆದರೆ, ಎಎಪಿ ಈ ಸಮೀಕ್ಷೆಗಳನ್ನು ನಿರಾಕರಿಸಿದ್ದು, ತಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

1998ರ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಎಂಬ ಕುತೂಹಲವೂ ಇದೆ. ಈ ಬಾರಿ ಬಿಜೆಪಿ ಜೆಡಿಯು ಮತ್ತು ಲೋಕ ಜನಶಕ್ತಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದೆ.

ದೆಹಲಿಯಲ್ಲಿ ಒಟ್ಟು 1.55 ಕೋಟಿ ಮತದಾರರಿದ್ದು, ಶೇ. 60.54ರಷ್ಟು ಮತದಾನವಾಗಿದೆ. 2020ರಲ್ಲಿ ಎಎಪಿ 62 ಸ್ಥಾನಗಳನ್ನು ಗೆದ್ದು, ಬಿಜೆಪಿ ಕೇವಲ 5 ಸ್ಥಾನ ಗಳಿಸಿತ್ತು.

ಚುನಾವಣೋತ್ತರ ಸಮೀಕ್ಷೆಗಳ ಅಂದಾಜು

  • ಆಕ್ಸಿಸ್ ಮೈ ಇಂಡಿಯಾ: ಬಿಜೆಪಿ 45-55, ಎಎಪಿ 15-25
  • CNX: ಬಿಜೆಪಿ 49-61
  • ಮ್ಯಾಟ್ರಿಜ್: ಎಎಪಿ 32-37, ಬಿಜೆಪಿ 35-40
  • ಪಿ-ಮಾರ್ಕ್: ಎಎಪಿ 39-44, ಬಿಜೆಪಿ 21-31
  • ಪೋಲ್ ಡೈರಿ: ಬಿಜೆಪಿ 42-50
  • ಜೆವಿಸಿ: 39-45

ಫಲಿತಾಂಶ ಏನಾಗಲಿದೆ? ಎಎಪಿಗೆ ಹ್ಯಾಟ್ರಿಕ್ ಸಿಗುತ್ತಾ? ಅಥವಾ 25 ವರ್ಷಗಳ ನಂತರ ಕಮಲ ಅರಳುತ್ತಾ? ಇನ್ನೂ ಕೆಲವೇ ಗಂಟೆಗಳಲ್ಲಿ ಉತ್ತರ ದೊರೆಯಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page