back to top
22.7 C
Bengaluru
Wednesday, October 29, 2025
HomeKarnatakaBengaluru Ruralಕೋಟೆ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

ಕೋಟೆ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

- Advertisement -
- Advertisement -

Devanahalli : ಐತಿಹಾಸಿಕ ಪ್ರಸಿದ್ಧ ಕೋಟೆ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ (Kote Venugopala Swamy Brahma Rathotsava) ವಿಜೃಂಭಣೆಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ವಿವಿಧ ಬಗೆ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೂ ಸುಭ್ರಭಾತ ಸೇವೆ, ತೋಮಾಲೆ ಸೇವೆ, ನವಗ್ರಹ ಪೂಜೆ ಕೈಂಕರ್ಯ ನಡೆಯಿತು. ಕೋಟೆ ಒಳಗಡೆ ವೇಣುಗೋಪಾಲ ಸ್ವಾಮಿ ದೇಗಲುದಲ್ಲಿ ಸತತ 10 ದಿನಗಳಿಂದ ಸೂರ್ಯಮಂಡಲೋತ್ಸವ, ಶೇಷವಾಹನೋತ್ಸವ, ಮೃತ್ತಿಕಾ ಸಂಗ್ರಹಣ, ಅಂಕುರಾ ರ್ಪಣಾ, ಪೀಠೋತ್ಸವ, ಹನುಮಂತವಾಹನೋತ್ಸವ, ಸಿಂಹವಾಹನೋತ್ಸವ, ಶೇಷವಾಹನೋತ್ಸವ, ಉಯ್ಯಾಲೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಲ್ಲೂಕು ಆಡಳಿತ ಮಂಡಳಿ ಸುರ್ಪದಿಯಲ್ಲಿದ್ದ ವೇಣುಗೋಪಾಲ ಸ್ವಾಮಿ ಆಭರಣಗಳನ್ನು ಖಜಾನೆಯಿಂದ ಹೊರತಂದು ಪೂಜೆ ಸಲ್ಲಿಸಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌, ಶಾಸಕ ನಿಸರ್ಗ ನಾರಾಯಣಸ್ವಾಮಿ, ತಹಶೀ ಲ್ದಾರ್‌ ಶಿವರಾಜ್‌, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ.ರವಿಕುಮಾರ್‌, ಶಿರಸ್ತೇದಾರ್‌ ಭರತ್‌ ಅವರ ಸಮ್ಮುಖದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ತಲೆ ಮೇಲೆ ಹೊತ್ತು ಬಿಗಿ ಪೊಲೀಸ್‌ ಬಂದೋ ಬಸ್ತ್‌ನಲ್ಲಿ ದೇಗುಲದತ್ತ ಸಾಗಿ ದೇವಾಲಯದ ಪ್ರಮುಖರಾದ ಜಗದೀಶ್‌, ಕುಮಾರ್‌, ಎಲೆ ಕೃಷ್ಣಮೂರ್ತಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.

ದೊಡ್ಡಅಣ್ಣಯ್ಯಣ್ಣನವರ ಛತ್ರದಲ್ಲಿ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ನಿಸರ್ಗ ನಾರಾಯಣಸ್ವಾಮಿ ನೆರೆದಿದ್ದ ಭಕ್ತರಿಗೆ ಊಟ ಬಡಿಸುವ ಮೂಲಕ ಭಕ್ತ ಪ್ರದರ್ಶನ ಮಾಡಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page