back to top
27.9 C
Bengaluru
Saturday, August 30, 2025
HomeKarnatakaBengaluru Ruralದೇವನಹಳ್ಳಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

ದೇವನಹಳ್ಳಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

- Advertisement -
- Advertisement -

Devanahalli, Bengaluru Rural : ದೇವನಹಳ್ಳಿ ಪುರಸಭೆಯ (Municipality) 11ನೇ ವಾರ್ಡ್‌ ಸದಸ್ಯ ಎಸ್.ಸಿ. ಚಂದ್ರಪ್ಪ ಸ್ಥಾಯಿ ಸಮಿತಿ (Standing Committee) ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಳಿಕ ವರದಿಗಾರರೊಂದಿಗೆ ಮಾತನಾಡಿದ ಚಂದ್ರಪ್ಪ, ‘ಅಧಿಕಾರ ಯಾರಿಗೂ ಶಾಶ್ವತವಲ್ಲ, ಜನರು ನಮಗೆ ಅಧಿಕಾರ ಕೊಟ್ಟಾಗ ನಾವು ಏನು ಮಾಡಿದ್ದೇವೆ ಎನ್ನುವುದು ಶಾಶ್ವತವಾಗಿ ಉಳಿಯಲಿದೆ. ಅಭಿವೃದ್ಧಿಗೆ ಪೂರಕವಾಗಿರುವ ಕ್ರಿಯಾಯೋಜನೆ ತಯಾರಿಸಿ, ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ಸದಸ್ಯರೊಟ್ಟಿಗೆ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ್, KPCC ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಸಿ. ಜಗನ್ನಾಥ್, ಪುರಸಭಾ ಉಪಾಧ್ಯಕ್ಷೆ ಪುಷ್ಪಲತಾ, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಎನ್. ರಘು, ಟೌನ್ JDS ಅಧ್ಯಕ್ಷ ಮುನಿನಂಜಪ್ಪ, ತಾಲ್ಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್, ಸದಸ್ಯ ಚೇತನ್ ಗೌಡ, ಚಿನ್ನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣಪ್ಪ, ಜಿಲ್ಲಾ Congress ಪ್ರಧಾನ ಕಾರ್ಯದರ್ಶಿ ಎ. ಚಂದ್ರಶೇಖರ್, ತಾಲ್ಲೂಕು ತಿಗಳರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಿ. ರಾಮಚಂದ್ರಪ್ಪ, ವಿಜಯಪುರ ಪುರಸಭಾ ಸದಸ್ಯರಾದ ವಿ. ನಂದಕುಮಾರ್, ರಾಜಣ್ಣ, ಕೃಷಿಕ ಸಮಾಜದ ತಾಲ್ಲೂಕು ಉಪಾಧ್ಯಕ್ಷ ಮಂಡಿಬೆಲೆ ದೇವರಾಜಪ್ಪ, ಸೈಪುಲ್ಲಾ, ವೇಣುಗೋಪಾಲ್. ಮೌಕ್ತಿಕಾಂಭ ದೇವಾಲಯದ ಸಮಿತಿ ಅಧ್ಯಕ್ಷ ಎಸ್.ಆರ್. ವಿಜಯಕುಮಾರ್ ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page