Vijayapura, Devanahalli : ವಿಜಯಪುರ ಪಟ್ಟಣದಲ್ಲಿ ಸಮೃದ್ದಿ ಗಣಪತಿ ಕನ್ನಡ ಯುವಕ ಸಂಘದ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಭಾನುವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿನಾಯಕ ಭಕ್ತಮಂಡಳಿ ಅಧ್ಯಕ್ಷ ಎಂ. ಶಂಕರ್ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಎಂ. ಶಂಕರ್ ಮಾತನಾಡಿ, “ಕನ್ನಡ ಶ್ರೀಮಂತ ಭಾಷೆ. ಇದು ಸಂಬಂಧಗಳನ್ನು ಬೆಸೆಯುವ ಮತ್ತು ಮನಸ್ಸುಗಳನ್ನು ಒಂದುಗೂಡಿಸುವ ಬಾಂಧವ್ಯದ ಶಕ್ತಿಯನ್ನು ಹೊಂದಿದೆ” ಎಂದು ಅಭಿಮತ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ. ಬಸವರಾಜು, ಸಮೃದ್ದಿ ಗಣಪತಿ ಕನ್ನಡ ಯುವಕ ಸಂಘದ ಅಧ್ಯಕ್ಷ ಎ. ಸೋಮೇಶ್, ರುದ್ರಮೂರ್ತಿ, ಮಹಂತಿನ ಮಠದ ಕಾರ್ಯದರ್ಶಿ ವಿಶ್ವನಾಥ್, ಸಿ. ಸುರೇಶ್, ಶಿವಕುಮಾರ್, ಬೇಗೂರು ಮಧು ಮತ್ತು ನಾಗರಾಜ್ ಉಪಸ್ಥಿತರಿದ್ದರು.