Vijayapura, Devanahalli : ವಿಜಯಪುರ ಪಟ್ಟಣದ ನಗರ್ತ ರುದ್ರಭೂಮಿಯ ಸಮೀಪ ಇರುವ ಪ್ರಶಾಂತ ಬಸವಣ್ಣ ದೇವಾಲಯದ ಜೀರ್ಣೋದ್ಧಾರದ 11ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ತಿಕ ತಿಂಗಳ ಕೊನೆಯ ಸೋಮವಾರ ಅಂಗವಾಗಿ ನ. 25ರಂದು ವಿಶೇಷ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದು ಅರ್ಚಕ ಗೌತಮ್ ಆರಾಧ್ಯ ಮಾಹಿತಿ ನೀಡಿದ್ದಾರೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವಾಲಯದಲ್ಲಿ ಅಭಿಷೇಕ, ಮಹಾಮಂಗಳಾರತಿ, ಕಡಲೆಕಾಯಿ ಪರಿಷೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಪ್ರಯುಕ್ತ ಪಟ್ಟಣದ ಗಾಂಧಿ ಚೌಕದ ನವಗ್ರಹ ದೇವಾಲಯದಿಂದ ಯಲುವಳ್ಳಿ ರಸ್ತೆಯ ಪ್ರಶಾಂತ ಬಸವಣ್ಣನವರ ದೇವಾಲಯದವರೆಗೆ ಉಚಿತ ಆಟೋ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.