Mumbai: ಮಹಾರಾಷ್ಟ್ರದ (Maharashtra) ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ (Devendra Fadnavis) ಆಯ್ಕೆಯಾಗಿದ್ದು, ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಏಕನಾಥ್ ಶಿಂಧೆ, ಅಜಿತ್ ಪವಾರ್‌ಗೆ ಡಿಸಿಎಂ ಹುದ್ದೆಯೇ ಗಟ್ಟಿಯಾಗಿದೆ. ಸರ್ಕಾರ ರಚನೆಯ ಮೈತ್ರಿ ಸೂತ್ರ ಇಂದು ರಿವೀಲ್ ಆಗಲಿದೆ.
ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು NCPನಾಯಕ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ (DCM) ಪ್ರಮಾಣವಚನ ಸ್ವೀಕರಿಸುವರು. ಮೂರು ಪಕ್ಷಗಳ ಮೈತ್ರಿಯೊಂದಿಗೆ ಮಹಾಯುತಿ 2.0 ಸರ್ಕಾರ ರಚನೆ.
ಮುಂಬೈನ ಆಜಾದ್ ಮೈದಾನದಲ್ಲಿ ಸಂಜೆ 5:30ಕ್ಕೆ ಪ್ರಮಾಣವಚನ ಸಮಾರಂಭ. ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.
2019ರಲ್ಲಿ ಸಿಎಂ ಸ್ಥಾನ ಕಳೆದುಕೊಂಡಿದ್ದ ದೇವೇಂದ್ರ ಫಡ್ನವೀಸ್, ಈಗ ಮತ್ತೊಮ್ಮೆ ಸಿಎಂ. 5 ವರ್ಷಗಳ ಹಿಂದೆ “ಸಮುದ್ರದಂತೆ ನಾನು ವಾಪಸ್ ಬರುತ್ತೇನೆ” ಎಂದು ಮಾಡಿದ್ದ ಶಪಥವನ್ನು ಇಂದು ಅವರು ಈಡೇರಿಸಿದ್ದಾರೆ. ಮಹಾರಾಷ್ಟ್ರದಲ್ಲಿ 12 ದಿನಗಳ ತೀವ್ರ ರಾಜಕೀಯ ಬೆಳವಣಿಗೆಗಳ ನಂತರ ಮಹಾಯುತಿ ಸರ್ಕಾರ ರಚನೆ ಸಾಧ್ಯವಾಯಿತು.
ಶಿವಸೇನೆಯ ಏಕನಾಥ್ ಶಿಂಧೆ ಗೃಹ ಖಾತೆಯ ಜೊತೆಗೆ ಡಿಸಿಎಂ ಆಗಲು ಒಪ್ಪಿದ್ದಾರೆ. NCP ನಾಯಕ ಅಜಿತ್ ಪವಾರ್ ಮತ್ತೊಬ್ಬ DCM ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಮೂರು ಪಕ್ಷಗಳ ಸಂಯೋಜನೆಯೊಂದಿಗೆ ಮಹಾಯುತಿ 2.0 ಸರ್ಕಾರ ಯಶಸ್ವಿಯಾಗಿ ಆರಂಭಗೊಂಡಿದೆ.