
Chikkaballapur : ಚಿಕ್ಕಬಳ್ಳಾಪುರದ ಭಗತ್‌ಸಿಂಗ್ ನಗರದ ಧರ್ಮರಾಯಸ್ವಾಮಿ ದೇವಾಲಯದ ಧರ್ಮರಾಯಸ್ವಾಮಿ ಹೂವಿನ ಕರಗ (Dharmarayaswamy Karaga) ಅದ್ದೂರಿಯಾಗಿ ನಡೆಯಿತು. ಧರ್ಮರಾಯಸ್ವಾಮಿ ದೇಗುಲದ ಸುತ್ತಲಿನ ಪ್ರದೇಶ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು.
ಕರಗದ ಪೂಜಾರಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಎಂ.ಬಾಲಾಜಿ, ಹೂವಿನ ಕರಗ ಹೊತ್ತು ನಗರ ಪ್ರದಕ್ಷಿಣೆ ಮಾಡಿದರು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಕರಗದ ಹಿಂದೆ ಹೆಜ್ಜೆ ಹಾಕಿದರು.
ಅಪಾರ ಸಂಖ್ಯೆಯ ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.
For Daily Updates WhatsApp ‘HI’ to 7406303366
The post ಧರ್ಮರಾಯಸ್ವಾಮಿ ಹೂವಿನ ಕರಗ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ.