ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ಬಂದ ದೂರು ವಿಚಾರಣೆ ನಡೆಸುತ್ತಿದ್ದ ಎಸ್ಐಟಿ ಅಧಿಕಾರಿಗಳು Maskman ಎಂದೇ ಪರಿಚಿತರಾದ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನ ಅವರನ್ನು ಬಂಧಿಸಿದ್ದಾರೆ.
ಚಿನ್ನಯ್ಯ ಅವರನ್ನು ತಲೆಬುರುಡೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಅವರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಬಳಿಕ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಎಸ್ಐಟಿ ಮನವಿ ಮಾಡುವ ಸಾಧ್ಯತೆ ಇದೆ.
Maskman ಮೇಲೆ ಹಲವು ಗಂಟೆಗಳ ವಿಚಾರಣೆ ನಡೆದಿದೆ. ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಸಹ ನಿನ್ನೆ ಮಧ್ಯಾಹ್ನದಿಂದಲೇ ವಿಚಾರಣೆ ನಡೆಸಿದ್ದರು.
Maskman ಹೇಳಿದ ಸ್ಥಳಗಳಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ನಡೆಸಿದಾಗ, ಒಂದು ಸ್ಥಳದಲ್ಲಿ ಅಸ್ಥಿಪಂಜರ, ಮತ್ತೊಂದು ಸ್ಥಳದಲ್ಲಿ ಮೂಳೆಗಳು ಪತ್ತೆಯಾಗಿದ್ದವು. ಆದರೆ ನಂತರ ಉತ್ಖನನ ಕಾರ್ಯವನ್ನು ನಿಲ್ಲಿಸಲಾಯಿತು.
Maskman ಜೊತೆ ಕೆಲಸ ಮಾಡಿದ್ದ ಮಂಡ್ಯದ ವ್ಯಕ್ತಿ, ದೂರುದಾರರ ಆರೋಪಗಳು ಸುಳ್ಳು ಎಂದು ಬಿಚ್ಚಿಟ್ಟಿದ್ದಾನೆ.