ಚೆನ್ನೈಯ ಎಂಎ ಚಿದಾಂಬರಂ ಮೈದಾನದಲ್ಲಿ (Chidambaram Stadium) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (Royal Challengers) ಬೆಂಗಳೂರು 50 ರನ್ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
RCB ತಂಡ ಫಿಲ್ ಸಾಲ್ಟ್ (32), ವಿರಾಟ್ ಕೊಹ್ಲಿ (31), ದೇವದತ್ ಪಡಿಕ್ಕಲ್ (27), ಟಿಮ್ ಡೆವಿಡ್ (22) ಮತ್ತು ನಾಯಕ ರಜತ್ ಪಾಟಿದಾರ್ (51) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತು. ಆದರೆ, ಗುರಿಯನ್ನು ಬೆನ್ನಟ್ಟಿದ ಸಿಎಸ್ಕೆ ಆರಂಭಿಕ ಆಘಾತ ಅನುಭವಿಸಿತು. ರಚಿನ್ ರವೀಂದ್ರ (41) ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್ ಅಲ್ಪ ಮೊತ್ತಕ್ಕೆ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಧೋನಿಯ ಹೋರಾಟದ ನಡುವೆಯೂ ಸಿಎಸ್ಕೆ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸಿಎಸ್ಕೆ ಸೋತರೂ ಧೋನಿಯ ಬ್ಯಾಟಿಂಗ್ ಅಭಿಮಾನಿಗಳನ್ನು ರಂಜಿಸಿತು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ಅಜೇಯ 30 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ 2 ಸಿಕ್ಸರ್ ಮತ್ತು 1 ಬೌಂಡರಿ ಸಿಡಿಸಿ ಚಿದಾಂಬರಂ ಮೈದಾನದಲ್ಲಿ ಸಂಭ್ರಮ ಸೃಷ್ಟಿಸಿದರು.
ಈ ಪಂದ್ಯದಲ್ಲಿ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಅಪರೂಪದ ದಾಖಲೆಯನ್ನು ಬರೆದರು. 26 ರನ್ ಗಡಿದಾಟಿದ ಕ್ಷಣವೇ ಅವರು ಸುರೇಶ್ ರೈನಾಗೆ (4687 ರನ್) ಮೀರಿ ಹೊಸ ಮೈಲಿಗಲ್ಲು ಸಾಧಿಸಿದರು.
CSK ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು
- 4699 – ಎಂಎಸ್ ಧೋನಿ (204 ಇನ್ನಿಂಗ್ಸ್)
- 4687 – ಸುರೇಶ್ ರೈನಾ (171 ಇನ್ನಿಂಗ್ಸ್)
- 2721 – ಫಾಫ್ ಡು ಪ್ಲೆಸಿಸ್ (86 ಇನ್ನಿಂಗ್ಸ್)
- 2433 – ರುತುರಾಜ್ ಗಾಯಕ್ವಾಡ್ (67 ಇನ್ನಿಂಗ್ಸ್)
1939 – ರವೀಂದ್ರ ಜಡೇಜಾ (127 ಇನ್ನಿಂಗ್ಸ್) CSK ಸೋತರೂ, ಧೋನಿಯ ದಾಖಲೆ ಅಭಿಮಾನಿಗಳಿಗೆ ಸಂತಸದ ಕ್ಷಣವನ್ನು ಒದಗಿಸಿತು!