ಇತ್ತೀಚಿನ ದಿನಗಳಲ್ಲಿ, ಸೈಬರ್ ವಂಚನೆಗಳು (cyber frauds) ಹೆಚ್ಚಾಗುತ್ತಿದ್ದು, ತಂತ್ರಜ್ಞಾನವನ್ನು ದುರುಪಯೋಗ ಮಾಡಿ ವಂಚಕರು ಜನರ ಹಣವನ್ನು ದೋಚುತ್ತಿದ್ದಾರೆ. ಈ ಹೊಸ ರೀತಿಯ ವಂಚನೆಗೆ “ಡಿಜಿಟಲ್ ಅರೆಸ್ಟ್” (Digital Arrest) ಎನ್ನಲಾಗುತ್ತಿದ್ದು, ಜನರನ್ನು ಹೆದರಿಸಿ ಅಥವಾ ಮ್ಯಾನಿಪುಲೇಟ್ ಮಾಡುವ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುತ್ತಿದ್ದಾರೆ.
ವಂಚನೆಗೆ ಹೇಗೆ ಬಲಿಯಾಗುತ್ತಾರೆ? ಸ್ಕ್ಯಾಮರ್ಸ್ ಅವರು ಕ್ರೈಂ ಬ್ರಾಂಚ್, ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುತ್ತಾರೆ. ನಿಮ್ಮ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಡೀಟೈಲ್ಸ್ ಬಗೆಗಿನ ಸುಳ್ಳು ಆರೋಪಗಳನ್ನು ಹೊರಿಸಿ, ಹೆದರಿಸುವ ಮೂಲಕ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಇರುವ ಹಣವನ್ನು ದೋಚಲು ಯತ್ನಿಸುತ್ತಾರೆ.
ವಂಚನೆಯಿಂದ Bengaluru ಮೂಲದ ನವೀನ್ ಶೌರಿ ಕೆಲದಿನಗಳ ಹಿಂದೆ ಪಾರಾಗಿದ್ದು, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಡಿಎಚ್‌ಎಲ್ ಲಾಜಿಸ್ಟಿಕ್ ಕಂಪನಿಯ ಹೆಸರಿನಲ್ಲಿ ಕರೆ ಮಾಡಿ, ಪಾರ್ಸೆಲ್‌ನಲ್ಲಿ ನಿಷೇಧಿತ ವಸ್ತುಗಳು ಇದ್ದಂತೆ ಸುಳ್ಳು ಆರೋಪ ಮಾಡಿ ಅವರನ್ನು ಸ್ಕ್ಯಾಮ್ ಮಾಡಲು ಯತ್ನಿಸಲಾಯಿತು. ತಾವು ಚಾಣಾಕ್ಷತೆಯಿಂದ ಕಾಲ್ ಕಟ್ ಮಾಡಿದ್ದು, ತಮ್ಮ ಬ್ಯಾಂಕ್ ಖಾತೆಯನ್ನು ತಕ್ಷಣ ಸ್ಥಗಿತಗೊಳಿಸಿದರು. ಕೇವಲ ಒಂದು ಕರೆ ಮೂಲಕ ಸ್ಕ್ಯಾಮರ್ಸ್ ನಮ್ಮನ್ನು ಹೇಗೆಲ್ಲಾ ವಂಚನೆ ಮಾಡ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಸ್ಕ್ಯಾಮರ್‌ಗಳ ತಂತ್ರ
- ಹೆಸರಾಂತ ಸಂಸ್ಥೆಗಳ ಹೆಸರಿನಲ್ಲಿ ಕರೆ: ಡಿಎಚ್‌ಎಲ್ ಅಥವಾ ಪೊಲೀಸ್ ಇಲಾಖೆಯ ಹೆಸರು ಬಳಸುವುದು.
- ಮಾಹಿತಿ ಕಲೆಹಾಕುವುದು: ಆಧಾರ್, DOB, ಮತ್ತು ಬ್ಯಾಂಕ್ ವಿವರಗಳನ್ನು ಬೇಧಿಸಿ.
- ಹೆದರಿಸುವದು: ಕಾನೂನಾತ್ಮಕ ಕಠಿಣ ಕ್ರಮಗಳು ತಕ್ಷಣವೇ ಕೈಗೊಳ್ಳಲಾಗುತ್ತದೆ ಎಂಬುದಾಗಿ ಹೇಳ್ತಾರೆ.
- ಭಯ ಮೂಡಿಸುವುದು: “ಅರೆಸ್ಟ್ ವಾರೆಂಟ್” ಅಥವಾ “ಕಾನೂನಾತ್ಮಕ ಸಮಸ್ಯೆ” ಎಂಬ ಹೆಸರಿನಲ್ಲಿ ಹಣ ದೋಚುವುದು.
ಹೆಚ್ಚಿನ ಮುನ್ನೆಚ್ಚರಿಕೆ
- ಇಂತಹ ಕರೆಗಳು ಬಂದರೆ ತಕ್ಷಣವೇ ಕಾಲ್ ಕಟ್ ಮಾಡಿ.
- ನಿಮ್ಮ ಬ್ಯಾಂಕ್ ಖಾತೆ ಅಥವಾ ಆಧಾರ್ ವಿವರಗಳನ್ನು ಅಪ್ರತಿಷ್ಠಿತ ವ್ಯಕ್ತಿಗಳಿಗೆ ಹಂಚಿಕೊಳ್ಳಬೇಡಿ.
- ತಕ್ಷಣವೇ ನಿಮ್ಮ ಬ್ಯಾಂಕ್ ಮತ್ತು ಸೈಬರ್ ಸೆಲ್ ಗೆ ಮಾಹಿತಿ ನೀಡಿರಿ.
- ವಂಚನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ, ಇನ್ನೂ ಜನರನ್ನು ಜಾಗೃತಗೊಳಿಸಿ.
ನಿಮ್ಮ ಚಾಣಾಕ್ಷತೆ ಮತ್ತು ಸಮಯೋಚಿತ ಕ್ರಮಗಳು ಇಂತಹ ಸೈಬರ್ ಸ್ಕ್ಯಾಮ್‌ಗಳಲ್ಲಿ ಬಲಿಯಾಗುವುದನ್ನು ತಪ್ಪಿಸಬಹುದು.