
Bengaluru: ಹಣಕಾಸು ಪಾವತಿ ಕ್ಷೇತ್ರದಲ್ಲಿ UPI ತರಹ ಎನರ್ಜಿ ಕ್ಷೇತ್ರದಲ್ಲೂ ದೊಡ್ಡ ಕ್ರಾಂತಿ ಸಂಭವಿಸಲಿದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ (Infosys co-founder Nandan Nilekani) ತಿಳಿಸಿದ್ದಾರೆ.
ಆರ್ಕಮ್ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಕೋಟ್ಯಾಂತರ ಜನರು ವಿದ್ಯುತ್ ವಹಿವಾಟು ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದರು. ಪ್ರತಿಯೊಂದು ಮನೆಯಲ್ಲೂ ಸೋಲಾರ್ ಪ್ಯಾನೆಲ್ ಮತ್ತು ಇವಿ ಬ್ಯಾಟರಿಗಳು ಸಾಮಾನ್ಯವಾಗಲಿದ್ದು, ಇದರಿಂದ ಎನರ್ಜಿ ಉತ್ಪಾದನೆ ಮತ್ತು ಸಂಗ್ರಹ ಸಾಧ್ಯವಾಗಲಿದೆ.
“ಮುಂದಿನ ಯುಪಿಐ ಕ್ಷಣವು ಎನರ್ಜಿ ಕ್ಷೇತ್ರದಲ್ಲಿ ಆಗಲಿದೆ. ಜನರು ಸಣ್ಣ ಮೊತ್ತದಲ್ಲಿ ವಿದ್ಯುತ್ ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಾಗಲಿದೆ. ಪ್ರತಿಯೊಬ್ಬರೂ ಉತ್ಪಾದಕರಾಗುವ ಯುಗ ಬರುತ್ತದೆ” ಎಂದು ಅವರು ಹೇಳಿದರು.
ಈ ಪರಿವರ್ತನೆಯು ಭಾರತಕ್ಕೆ ಇಂಧನ ಸ್ವಾವಲಂಬನೆ ತರಲಿದೆ. ಸಣ್ಣ ಉತ್ಪಾದಕರು ಕೂಡಾ ಈ ವ್ಯವಸ್ಥೆಯಿಂದ ಲಾಭ ಪಡೆಯಲಿದ್ದಾರೆ.
ಕೆಲವರು ಈ ಪರಿಕಲ್ಪನೆಯನ್ನು ಆಶಯಭರಿತ ಎಂದು ಹೊಗಳಿದ್ದಾರೆ. ಮತ್ತೆ ಕೆಲವರು, “ಎಲ್ಲರೂ ಮಾರಾಟಗಾರರಾದರೆ ಖರೀದಿದಾರರು ಯಾರು?” ಎಂದು ಪ್ರಶ್ನಿಸಿದ್ದಾರೆ.
2035ರ ಹೊತ್ತಿಗೆ 10 ಲಕ್ಷಕ್ಕೂ ಹೆಚ್ಚು startups ಸ್ಥಾಪನೆಯಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸಣ್ಣ ನಗರಗಳಲ್ಲೂ startups ಬೆಳವಣಿಗೆ ವೇಗವಾಗಿ ನಡೆಯುತ್ತಿದೆ. ಡಿಜಿಟಲ್ ಎನರ್ಜಿ ಗ್ರಿಡ್ ಮೂಲಕ ಭಾರತದ ಎನರ್ಜಿ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆ ಎದುರಾಗಬಹುದು!