Home India New Delhi Maldives ನಿಂದ India ದ UPI ಅಳವಡಿಕೆ

Maldives ನಿಂದ India ದ UPI ಅಳವಡಿಕೆ

Maldives Set yo Implement Inida's UPI Payment System

New Delhi: ಜಗತ್ತಿನ ಹಲವು ದೇಶಗಳ ಗಮನ ಸೆಳೆದಿರುವ, ಮತ್ತು ಕೆಲ ದೇಶಗಳಲ್ಲಿ ಈಗಾಗಲೇ ಅಳವಡಿಕೆ ಆಗಿರುವ ಭಾರತದ (India) ಪೇಮೆಂಟ್ ಸಿಸ್ಟಂ (payment system) ಅದ UPI, ಅನ್ನು Maldives ಕೂಡ ಅಪ್ಪಿಕೊಂಡಿದೆ.

ಹಣಕಾಸು ವಹಿವಾಟು ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರ್ಥಿಕತೆಗೆ ಉತ್ತೇಜನ ನೀಡಲು ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಅನ್ನು ಜಾರಿ ಮಾಡುತ್ತಿರುವುದಾಗಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಹೇಳಿದ್ದಾರೆ.

ಆ ದೇಶದ ಸಂಪುಟದಿಂದ ಈ ಹಿಂದೆ ಯುಪಿಐ ಅಳವಡಿಕೆಗೆ ಶಿಫಾರಸು ಮಾಡಲಾಗಿತ್ತು. ಈಗ ಅಧ್ಯಕ್ಷರು ಈ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಭಾರತದ ಯುಪಿಐ ಅಳವಡಿಕೆಯಿಂದ ಹಣಕಾಸು ಒಳಗೊಳ್ಳುವಿಕೆ, ವಹಿವಾಟು ಕ್ಷಮತೆ ಹೆಚ್ಚಿಸಬಹುದು, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಅನ್ನು ಉನ್ನತೀಕರಿಸಬಹುದು. ಹೀಗಾಗಿ, ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ ಸಿಸ್ಟಂ ಅನ್ನು ಅಳವಡಿಸುವುದು ಉತ್ತಮ ಎಂದು ಮಾಲ್ಡೀವ್ಸ್ನ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರು ಪ್ರಸ್ತಾವನೆ ಮಾಡಿದ್ದರು.

ಇತ್ತೀಚೆಗೆ ಅಲ್ಲಿನ ಕ್ಯಾಬಿನೆಟ್ ಈ ಪ್ರಸ್ತಾಪವನ್ನು ಪರಿಗಣಿಸಿ ಅಂಗೀಕಾರ ನೀಡಿತ್ತು. ಈಗ ಅಧ್ಯಕ್ಷರು ಅಧಿಕೃತವಾಗಿ ಯುಪಿಐ ವ್ಯವಸ್ಥೆ ಜಾರಿ ಮಾಡಲಾಗುತ್ತಿರುವುದನ್ನು ಘೋಷಿಸಿದ್ದಾರೆ.

ಭಾರತದಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಪ್ರಬಲವಾಗಿದೆ. ಆಧಾರ್ನಿಂದ ಶುರುವಾಗಿ, ಸಾಕಷ್ಟು ಸ್ತರಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಲಾಗಿದೆ.

ಈ ವ್ಯವಸ್ಥೆಯನ್ನು ಇತರ ದೇಶಗಳಲ್ಲೂ ಅಳವಡಿಕೆಯಾಗಲು ಭಾರತ ಬಯಸುತ್ತಿದೆ. ಹಲವು ದೇಶಗಳು ಇದಕ್ಕೆ ಆಸಕ್ತಿ ತೋರಿವೆ. ಹಣಕಾಸು ವ್ಯವಸ್ಥೆಯಲ್ಲಿ ತೊಡಕು ಅನುಭವಿಸುತ್ತಿರುವ ಮಾಲ್ಡೀವ್ಸ್ ದೇಶಕ್ಕೆ ಭಾರತ ನೆರವಿನ ಹಸ್ತ ಚಾಚಿದೆ. ಮಾಲ್ಡೀವ್ಸ್ ಅಧ್ಯಕ್ಷರು ಇತ್ತೀಚೆಗೆ ಭಾರತದ ಭೇಟಿಗೆ ಬಂದಾಗ ನಡೆದ ಮಾತುಕತೆಗಳು ಫಲಪ್ರದವಾಗಿದ್ದವು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version