back to top
26.4 C
Bengaluru
Wednesday, October 29, 2025
HomeNewsಅಂಗವೈಕಲ್ಯ MBBS ಪ್ರವೇಶಕ್ಕೆ ಅಡ್ಡಿಯಾಗದು-Supreme Court

ಅಂಗವೈಕಲ್ಯ MBBS ಪ್ರವೇಶಕ್ಕೆ ಅಡ್ಡಿಯಾಗದು-Supreme Court

- Advertisement -
- Advertisement -

ವಾಕ್ ಮತ್ತು ಭಾಷಾ ನ್ಯೂನತೆ ಶೇ 40ಕ್ಕಿಂತ ಹೆಚ್ಚು ಇರುವವರಿಗೆ MBBS ಕೋರ್ಸ್‌ಗಳಿಗೆ ಪ್ರವೇಶಾತಿ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [Omkar v. Union of India and others case].

ರಾಷ್ಟ್ರೀಯ ವೈದ್ಯಕೀಯ ಆಯೋಗದ (National Medical Commission-NMC) ದೃಷ್ಟಿಕೋನ ಅಭ್ಯರ್ಥಿಗಳನ್ನು ಅನರ್ಹಗೊಳಿಸುವುದು ಹೇಗೆ ಎಂಬುದರ ಕುರಿತು ಇರಬಾರದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಹೇಳಿದ್ದಾರೆ.

ವಾಕ್ ಮತ್ತು ಭಾಷಾ ನ್ಯೂನತೆ ಶೇ 40ಕ್ಕಿಂತ ಹೆಚ್ಚು ಇರುವವರಿಗೆ ಎಂಬಿಬಿಎಸ್ ಕೋರ್ಸ್‌ಗಳಿಗೆ ಪ್ರವೇಶಾತಿ ನಿರಾಕರಿಸುವ ನಿಯಮಾವಳಿ ವಿರುದ್ಧ ಅರ್ಜಿದಾರರ ಮನವಿ ಮುಂದೂಡಿದ್ದ ಬಾಂಬೆ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

‘ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು’ ವರ್ಗದ ಅಡಿಯಲ್ಲಿ MBBS ಕೋರ್ಸ್‌ ಪ್ರವೇಶ ಪಡೆಯುವುದಕ್ಕೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರ ಕೋರಿದ್ದ ಅರ್ಜಿದಾರರ ಮನವಿ ಪರಿಗಣಿಸದೆ ಹೈಕೋರ್ಟ್ ಮೂರು ವಾರಗಳ ಕಾಲ ಪ್ರಕರಣ ಮುಂದೂಡಿತ್ತು.

ಎಂಬಿಬಿಎಸ್ ಕೋರ್ಸ್ ಮುಂದುವರಿಸಲು ಅರ್ಜಿದಾರರ ವಾಕ್ ಮತ್ತು ಭಾಷಾ ಅಸಾಮರ್ಥ್ಯ ಅಡ್ಡಿಯಾಗುತ್ತದೆಯೇ ಎಂದು ಪರಿಶೀಲಿಸಲು ವೈದ್ಯಕೀಯ ಮಂಡಳಿ ರಚಿಸುವಂತೆ ಸೆಪ್ಟೆಂಬರ್ 2ರಂದು ನೀಡಿದ್ದ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಪುಣೆಯ ಬೈರಾಮ್ಜೀ ಜೀಜೀಭೋಯ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಅವರಿಗೆ ನಿರ್ದೇಶಿಸಿತ್ತು.

ಪ್ರವೇಶಾತಿ ನಿರಾಕರಿಸಲು ಅಭ್ಯರ್ಥಿಯ ಶೇ 44-45ರಷ್ಟು ಅಂಗವೈಕಲ್ಯ ಕಾರಣವಾಗಬಾರದು ಎಂದು ನ್ಯಾಯಾಲಯ ಇಂದು ಅಭಿಪ್ರಾಯಪಟ್ಟಿದೆ. ಬದಲಾಗಿ, ಪ್ರತಿ ಅಭ್ಯರ್ಥಿಯನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಬೇಕು ಎಂದು ಅದು ಹೇಳಿದೆ.

ಮೇಲ್ಮನವಿ ಮಂಡಳಿ ರಚಿಸುವುದು ಬಾಕಿ ಉಳಿದಿರುವುದರಿಂದ ಅಂಗವೈಕಲ್ಯ ಮೌಲ್ಯಮಾಪನ ಮಂಡಳಿಯ ನಿರ್ಧಾರ ಪ್ರಶ್ನಿಸಿ ನ್ಯಾಯ ನಿರ್ಣಯ ಮಾಡುವ ಸಂಸ್ಥೆಯ ಎದುರು ಮೇಲ್ಮನವಿ ಸಲ್ಲಿಸಬಹುದು ಎಂದು ಅದು ನಿರ್ದೇಶಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page