Bengaluru: BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, (BJP MLA Basanagouda Patil Yatnal) ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಂಡಾಯ ಸಾರಿದ್ದರು. ದೆಹಲಿಯಲ್ಲಿ ಹೈಕಮಾಂಡ್ ನಾಯಕರಿಂದ ಶಿಸ್ತಿನ ಪಾಠವನ್ನು ಸ್ವೀಕರಿಸಿದ್ದಾರೆ. ಕೇಂದ್ರ ಶಿಸ್ತು ಸಮಿತಿಯ ನೋಟಿಸ್ಗೆ 6 ಪುಟಗಳ ಲಿಖಿತ ಉತ್ತರ ನೀಡಿ, ಖುದ್ದು ಹಾಜರಾಗಿ ವಿಷಯವನ್ನು ಮೌಖಿಕವಾಗಿ ಸ್ಪಷ್ಟಪಡಿಸಿದರು.
ಯತ್ನಾಳ್ ಹೇಳಿಕೆಯ ಪ್ರಕಾರ
- ವಕ್ಫ್ ಬೋರ್ಡ್ ವಿರುದ್ಧ ತಮ್ಮ ಹೋರಾಟವನ್ನು ಸೂಕ್ತ ಎಂದು ಸಮರ್ಥಿಸಿಕೊಂಡಿದ್ದಾರೆ.
- ರಾಜ್ಯಾಧ್ಯಕ್ಷ ವಿಜಯೇಂದ್ರ ಗುಂಪುಗಾರಿಕೆಯಿಂದ ಪಕ್ಷಕ್ಕೆ ಹಾನಿ ಉಂಟಾಗಿದೆ ಎಂದಿದ್ದಾರೆ.
- BSY ವಿರುದ್ಧ ಪ್ರಕರಣಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಅನಿವಾರ್ಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.
- ಹಿಂದುತ್ವ ಪರ ನಿಲುವು ಹೊಂದಿದ್ದರೂ, ಇದು ಪಕ್ಷದ ವಿರೋಧಿ ಚಟುವಟಿಕೆ ಎನ್ನಲಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಸ್ತು ಸಮಿತಿ ಮುಂದೆ ಉತ್ತರ ಕೊಟ್ಟು ನಗುನುಗತ್ತಲೇ ಹೊರ ಬಂದ ಯತ್ನಾಳ್, ನನ್ನ ನಗು ನೋಡಿದರೆ ಏನಾದರೂ ಆಗಿದೆ ಎಂದು ನಿಮಗೆ ಅನಿಸುತ್ತಿದೆಯೇ ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲ, ಒಳ್ಳೆಯ ಭವಿಷ್ಯವಿದೆ. ಶಾಂತವಾಗಿರಿ ಎಂದಿದ್ದಾರೆ.
ವಿಪಕ್ಷ ನಾಯಕ ಅಶೋಕ್ ಮತ್ತು ಶಿಸ್ತಿನ ಸಮಿತಿಯ ಬಗ್ಗೆ ಕಮೆಂಟ್ ಮಾಡಿದ ಬೆನ್ನಲ್ಲೇ, ಮಾಜಿ ಸಿಎಂ ಡಿವಿ ಸದಾನಂದಗೌಡ ಅಶಿಸ್ತು ತೋರಿದವರನ್ನು ಪಕ್ಷದಿಂದ ಹೊರ ಹಾಕಲು ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೋರ್ ಕಮಿಟಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಬಂಡಾಯವು ದೀರ್ಘಕಾಲೀನವಾಗಿ ಪಕ್ಷದ ಅಂತರದ ಸಮರಕ್ಕೆ ಸ್ಪಷ್ಟತೆ ನೀಡಲಿದೆಯಾ ಅಥವಾ ಹೊಸತೊಂದು ತಿರುವು ತರಲಿದೆಯಾ ಎಂಬುದನ್ನು ಮುಂದೆ ನೋಡಬೇಕಾಗಿದೆ.