Search
WhatsApp alerts

Home › Business

Traffic Fine ಪಾವತಿಗೆ ರಿಯಾಯಿತಿ: ಮೊದಲ 2 ದಿನಗಳಲ್ಲಿ ₹7.19 ಕೋಟಿ ಸಂಗ್ರಹ

administrator · Published

Discount on traffic fine payment

Bengaluru: ಸರ್ಕಾರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ 50% ರಿಯಾಯಿತಿ ಘೋಷಿಸಿದ ನಂತರ, ಕೇವಲ ಎರಡು ದಿನಗಳಲ್ಲಿ ₹7.19 ಕೋಟಿ ದಂಡ ಪಾವತಿಸಲಾಗಿದೆ.

  • ಒಟ್ಟು 2,56,102 ಪ್ರಕರಣಗಳು ಇತ್ಯರ್ಥಗೊಂಡಿದ್ದು, ₹7,19,51,500 ರೂ. ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
  • ರಿಯಾಯಿತಿ ಆಗಸ್ಟ್ 23ರಿಂದ ಸೆಪ್ಟೆಂಬರ್ 12ರವರೆಗೆ ಲಭ್ಯ.
  • ಇದು 2023ರ ಫೆಬ್ರವರಿ 11ರೊಳಗೆ ದಾಖಲಾಗಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ.

ದಂಡ ಪಾವತಿ ಹೇಗೆ?

  • BTP ಅಸ್ತ್ರಂ ಆ್ಯಪ್, KSP ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್‌ಸೈಟ್ ಮೂಲಕ ವಾಹನದ ನಂಬರ್ ನಮೂದಿಸಿ ಉಲ್ಲಂಘನೆ ಪ್ರಕರಣ ನೋಡಬಹುದು.
  • ಪಾವತಿಸಬೇಕಾದ ದಂಡವನ್ನು ಆಯ್ಕೆ ಮಾಡಿದರೆ, ರಿಯಾಯಿತಿ ಮೊತ್ತ ತೋರಿಸಲಾಗುತ್ತದೆ.
  • ಹತ್ತಿರದ ಸಂಚಾರ ಪೊಲೀಸ್ ಠಾಣೆ ಅಥವಾ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿಯೂ ಪಾವತಿಸಬಹುದು.
  • ತಪ್ಪಾಗಿ ದಂಡ ವಿಧಿಸಿದರೆ, ಆನ್‌ಲೈನ್ ಮರುಪರಿಶೀಲನೆ ದೂರು ಅಥವಾ ನೇರವಾಗಿ ಕೇಂದ್ರದಲ್ಲಿ ದೂರು ಸಲ್ಲಿಸಬಹುದು.

ಇ-ಚಲನ್ ಎಂದರೇನು?

  • ಸಂಚಾರ ನಿಯಮ ಉಲ್ಲಂಘನೆ ಹಾಗೂ ದಂಡದ ವಿವರಗಳನ್ನು ಹೊಂದಿರುವ ಡಿಜಿಟಲ್ ದಾಖಲೆ.
  • ಸಂಚಾರಿ ಪೊಲೀಸ್ ಸಿಬ್ಬಂದಿ ಸ್ವೈಪಿಂಗ್ ಸಾಧನ ಮೂಲಕ ಇದನ್ನು ನೀಡುತ್ತಾರೆ.
  • ಎಲ್ಲಾ ದಾಖಲೆಗಳು ನೇರವಾಗಿ ಪೊಲೀಸ್ ಸರ್ವರ್‌ನಲ್ಲಿ ದಾಖಲಾಗಿ, ಲಂಚ ಪಡೆಯುವ ಅವಕಾಶ ತಪ್ಪುತ್ತದೆ.
  • ಇದು ಕಾಗದರಹಿತ, ಪಾರದರ್ಶಕ, ಡಿಜಿಟಲ್ ವ್ಯವಸ್ಥೆ, ಕೆಲಸವನ್ನು ಸರಳಗೊಳಿಸುತ್ತದೆ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page