ವಿಧಾನಸಭೆಯ ಎರಡನೇ ದಿನ ಪ್ರಶ್ನೋತ್ತರ ಕಲಾಪದಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದವು. ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವೇಳೆ, ಬಿಜೆಪಿ ಶಾಸಕ ಮುನಿರತ್ನರ ಜೊತೆ ಮಾತಿನ ಚಕಮಕಿ ನಡೆಯಿತು. ಡಿಕೆಶಿ ಮುನಿರತ್ನರಿಗೆ ನೇರವಾಗಿ “ಏನು ಹೇಳಬೇಕೋ ಅದನ್ನೇ ಹೇಳಿ” ಎಂದು ವಾರ್ನಿಂಗ್ ನೀಡಿದರು.
- ಮೆಟ್ರೋ ಸ್ಟೇಷನ್ ವಿಚಾರ: ಮುನಿರತ್ನರು ಬೆಟ್ಟ ಹಲಸೂರು ಬಳಿ ನಿರ್ಮಾಣವಾಗಬೇಕಿದ್ದ ಮೆಟ್ರೋ ಸ್ಟೇಷನ್ ವಿಷಯವನ್ನು ಎತ್ತಿದರು.
- ಹಿಂದಿನ ಅನುಮತಿ ಇದ್ದರೂ, ಇದೀಗ ಯೋಜನೆ ಕೈಬಿಟ್ಟಿದ್ದಾರೆ ಎಂದು ಆರೋಪ
- ಸಾರ್ವಜನಿಕರ ಹಿತಕ್ಕಾಗಿ ಸರ್ಕಾರವೇ ನಿರ್ಮಿಸಬೇಕು ಎಂದು ಒತ್ತಾಯ
- ಡಿಕೆಶಿ ಉತ್ತರ: ಪ್ರಧಾನಿ ಬೆಂಗಳೂರಿಗೆ ಬಂದು ಯೋಜನೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು
- CSR ಫಂಡ್ ಮೂಲಕ ಕೆಲವು ಯೋಜನೆಗಳಿಗೆ ಹೆಸರು ಇಡುವ ಅವಕಾಶ ಇದೆ ಎಂದರು
- ಹಾಸ್ಯಮಿಶ್ರಿತ ಟಾಂಗ್, “ಮುನಿರತ್ನರ 70-80 ಎಕರೆ ಜಮೀನು ಅಲ್ಲಿರಬೇಕು”
- ಮುನಿರತ್ನ ಹೇಳಿಕೆಗೆ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿ, ತಾವು ಮೆಟ್ರೋ ಬೆಂಬಲಿಸಿದರೂ, ಡಿಕೆಶಿ ಹೇಳಿದ ಒತ್ತಡದ ವಿಷಯ ಸತ್ಯವಲ್ಲ ಎಂದು ಸ್ಪಷ್ಟನೆ ನೀಡಿದರು
- MNC 119 ಕೋಟಿ ಕೊಡಲು ಹೇಳಿ, ಕೇವಲ 1 ಕೋಟಿ ಕೊಟ್ಟಿದ್ದಾರೆ
“ಮುನಿರತ್ನರೇ 119 ಕೋಟಿ ಕೊಟ್ಟರೆ, ಸ್ಟೇಷನ್‌ಗೆ ಅವರ ಹೆಸರನ್ನೇ ಇಡೋಣ” ಎಂದು ವ್ಯಂಗ್ಯವಾಡಿದರು