Doddaballapur : ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಹುಂಡಿ ಎಣಿಕೆಯಲ್ಲಿ ಭಕ್ತರು ಭರ್ಜರಿಯಾಗಿ ಕಾಣಿಕೆ ಅರ್ಪಿಸಿದ್ದಾರೆ. ಎಣಿಕೆ ಕಾರ್ಯದಲ್ಲಿ ಒಟ್ಟು 59 ಲಕ್ಷ ರೂಪಾಯಿ ಸಂಗ್ರಹವಾಗಿದೆ.
ಇದಲ್ಲದೆ, ಭಕ್ತರು ಬೆಳ್ಳಿ ಮತ್ತು ಚಿನ್ನವನ್ನೂ ಕಾಣಿಕೆಯಾಗಿ ನೀಡಿದ್ದಾರೆ. 1 ಕೆಜಿ 400 ಗ್ರಾಂ ತೂಕದ ಬೆಳ್ಳಿ (ಅಂದಾಜು ಮೌಲ್ಯ 63 ಸಾವಿರ ರೂಪಾಯಿ) ಮತ್ತು 19 ಗ್ರಾಮ್ 500 ಮಿಲಿ ತೂಕದ ಚಿನ್ನ (ಅಂದಾಜು ಮೌಲ್ಯ 1.57 ಲಕ್ಷ ರೂಪಾಯಿ) ಸಂಗ್ರಹವಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಯು ಭಕ್ತರ ಈ ಭಕ್ತಿಗೆ ಕೃತಜ್ಞತೆ ಸಲ್ಲಿಸಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ಅನೇಕ ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ ಸಹಕರಿಸಿದರು.
ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನವು ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿದ್ದು, ರಾಜ್ಯದಾದ್ಯಂತ ಭಕ್ತರನ್ನು ಹೊಂದಿದೆ.