ಹೆಚ್ಚದ ಸರಕುಗಳ ಬೆಲೆ ಮತ್ತು ಈಕ್ವಿಟಿ ಮಾರುಕಟ್ಟೆಗಳಿಂದ (Equity Market) ವಿದೇಶಿ ಬಂಡವಾಳ (FII) ಹಿಂತೆಗೆತದಿಂದ ಯುಎಸ್ ಡಾಲರ್(US Dollar) ವಿರುದ್ಧ ಭಾರತೀಯ ರೂಪಾಯಿ(Indian Rupee)ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ಇದರ ಜೊತೆ ಕಚ್ಚಾ ತೈಲದ (Crude Oil) ಬೆಲೆಗಳೂ ಸಹ ರಷ್ಯಾ-ಉಕ್ರೇನ್ ಯುದ್ಧ (Russia – Ukraine War)ದಿಂದಾಗಿ ಏರಿಕೆ ಕಂಡಿರುವುದು ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿದೆ.
ಸೋಮವಾರ ಬ್ರೆಂಟ್ ಕಚ್ಚಾ ತೈಲ (Brent Crude Oil) ಬೆಲೆ ಉಕ್ರೇನ್ ಬಿಕ್ಕಟಿನ ಕಾರಣ ಬ್ಯಾರೆಲ್ ಗೆ 130 USD ಗಳಾಗಿತ್ತು. ಈ ಪ್ರಕ್ರಿಯೆಯು ಭಾರತೀಯ ಈಕ್ವಿಟಿ ಮಾರುಕಟ್ಟೆಯಲ್ಲಿ FII ಗಳ ಮಾರಾಟವನ್ನ ವೇಗಗೊಳಿಸಿದ್ದಲ್ಲದೆ ಸೋಮವಾರದ Trading Session ಪ್ರಾರಂಭದಲ್ಲಿ 1 USD ಗೆ ಭಾರತೀಯ ರೂಪಾಯಿ ದಾಖಲೆಯ 77.02 ರೂಪಾಯಿ ಮುಟ್ಟಿದೆ.